ಮೈಸೂರು ಸಿಲ್ಕ್ ಸೀರೆಯ ವೈಭವಶಾಲಿ ಇತಿಹಾಸ : 1912ರಲ್ಲಿ ಆರಂಭವಾದ ರಾಜಮರ್ಯಾದೆಯ ಪರಂಪರೆ
ಬೆಂಗಳೂರು: ಕರ್ನಾಟಕದ ಹೆಮ್ಮೆ ಎಂದೇ ಪರಿಗಣಿಸಲ್ಪಡುವ ಮೈಸೂರು ಸಿಲ್ಕ್ ಸೀರೆಯು ತನ್ನ ವೈಭವಶಾಲಿ ಇತಿಹಾಸ ಮತ್ತು ರಾಜವಂಶದ ಪರಂಪರೆಯಿಂದ ದೇಶ–ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. 20ನೇ ಶತಮಾನದ ಆರಂಭದಲ್ಲಿ ಆರಂಭವಾದ ಈ ಸೀರೆಯ ಕಥೆ, ಇಂದು ಜಾಗತಿಕ ಮಾರುಕಟ್ಟೆಯಲ್ಲೂ ತನ್ನದೇ ಆದ ಸ್ಥಾನವನ್ನು ಪಡೆದಿದೆ.
ಲೋಕ ಶಿಕ್ಷಣ ಟ್ರಸ್ಟ್‌ನ ಹೆಮ್ಮೆಯ ಮಾಸಪತ್ರಿಕೆ ‘ಕಸ್ತೂರಿ’ ಸಂಪಾದಕಿ ಶಾಂತಲಾ ಧರ್ಮರಾಜ್ ಅವರು ಮೈಸೂರು ಸಿಲ್ಕ್ ಸೀರೆ ಕುರಿತಂತೆ ಸಂಯುಕ್ತ ಕರ್ನಾಟಕ ಯೂಟ್ಯೂಬ್ ಚಾನೆಲ್ ನಲ್ಲಿ ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ. : Mysore Silk Saree Lovers SHOCKED | Karnataka Govt Big Move in T Narasipura
ಇದನ್ನೂ ಓದಿ: ಇರಾನ್ ಮೇಲೆ ಇಸ್ರೇಲ್ ದಾಳಿ: ಸಂಘರ್ಷ ತೀವ್ರಗೊಳ್ಳುವ ಸೂಚನೆ
ರೇಷ್ಮೆ ಕೃಷಿಗೆ ಅಡಿಪಾಯ: ಮೈಸೂರು ಪ್ರದೇಶದಲ್ಲಿ ರೇಷ್ಮೆ ಕೃಷಿಗೆ ಅಡಿಪಾಯ ಹಾಕಿದವರು ಟಿಪ್ಪು ಸುಲ್ತಾನ್ (1780-1790ರ) ಅವಧಿಯಲ್ಲಿ ಅವರು ಬಂಗಾಳ ಮತ್ತು ಚೀನಾದಿಂದ ತಜ್ಞರನ್ನು ಕರೆಸಿ ರೇಷ್ಮೆ ಹುಳು ಸಾಕಾಣಿಕೆಗೆ ಉತ್ತೇಜನ ನೀಡಿದರು.
ಸಿಲ್ಕ್ ಸೀರೆಗೆ ರಾಜಮನೆತನದ ಪರಂಪರೆ: 1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಿಲ್ಕ್ ಉತ್ಪಾದನೆಯನ್ನು ಅಧಿಕೃತವಾಗಿ ಆರಂಭಿಸಿದರು. ಆರಂಭದಲ್ಲಿ ಈ ಸೀರೆಗಳನ್ನು ಕೇವಲ ರಾಜಮನೆತನದವರು ಮತ್ತು ಅರಮನೆಯ ಪ್ರಮುಖರಿಗಾಗಿ ಮಾತ್ರ ತಯಾರಿಸಲಾಗುತ್ತಿತ್ತು.
ಇದನ್ನೂ ಓದಿ: ‘ಆಪರೇಷನ್ ರೈಸಿಂಗ್ ಲಯನ್’: ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್
ಆಧುನಿಕತೆ ಹಾಗೂ ತಯಾರಿಕೆಯ ಉಗಮ: 1912ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ ಮಹಾರಾಜರು ಅಲ್ಲಿನ ಯಂತ್ರೋತ್ಪನ್ನ ರೇಷ್ಮೆಯಿಂದ ಪ್ರಭಾವಿತರಾಗಿ, ಸ್ವಿಟ್ಜರ್ಲೆಂಡ್‌ನಿಂದ 32 ಆಧುನಿಕ ಪವರ್ ಲೂಮ್‌ಗಳನ್ನು ಆಮದು ಮಾಡಿಕೊಂಡು ಮೈಸೂರಿನಲ್ಲಿ ಸರ್ಕಾರಿ ರೇಷ್ಮೆ ನೇಯ್ಗೆ ಕಾರ್ಖಾನೆಯನ್ನು ಸ್ಥಾಪಿಸಿದರು. ಇದು ಮೈಸೂರು ಸಿಲ್ಕ್ ಉದ್ಯಮಕ್ಕೆ ಮಹತ್ವದ ತಿರುವು ನೀಡಿತು.
ವಿಶೇಷತೆಗಳು: ಅತ್ಯುತ್ತಮ ಗುಣಮಟ್ಟದ ಮಲ್ಬೆರಿ ರೇಷ್ಮೆ ಬಳಕೆ, ಬಾರ್ಡರ್‌ನಲ್ಲಿ ಅಪ್ಪಟ ಬೆಳ್ಳಿ (ಸುಮಾರು 65%) ಮತ್ತು ಚಿನ್ನದ (0.65%) ಲೇಪಿತ ಝರಿ, ಸರಳ, ಶ್ರೇಷ್ಠ ಮತ್ತು ರಾಜಮರ್ಯಾದೆಯ ವಿನ್ಯಾಸ. ಈ ಗುಣಲಕ್ಷಣಗಳಿಂದ ಮೈಸೂರು ಸಿಲ್ಕ್ ಸೀರೆಗಳು ವೈಭವ ಮತ್ತು ನೈಜ ಗುಣಮಟ್ಟದ ಪ್ರತೀಕವಾಗಿವೆ.
ಇದನ್ನೂ ಓದಿ: AI ಯುಗಕ್ಕೆ ಬಲ ನೀಡುವ ಉತ್ಪಾದನಾ ಘಟಕ ಉದ್ಘಾಟನೆ
GI ಟ್ಯಾಗ್ ಪಡೆದ ಮೈಸೂರು ಸಿಲ್ಕ್: ಮೈಸೂರು ಸಿಲ್ಕ್ ಸೀರೆಗೆ 2005 ರಲ್ಲಿ ಭೌಗೋಳಿಕ ಸೂಚಕ (Geographical Indication – GI) ಮಾನ್ಯತೆ ದೊರೆಯಿತು. ಇದು ಈ ಸೀರೆಗೆ ಸಿಕ್ಕ ಅತ್ಯಂತ ದೊಡ್ಡ ಕಾನೂನಾತ್ಮಕ ಗೌರವವಾಗಿದೆ. ‘ಮೈಸೂರು ಸಿಲ್ಕ್’ ಎಂಬ ಹೆಸರನ್ನು ಕೇವಲ ಕರ್ನಾಟಕ ಸರ್ಕಾರಿ ರೇಷ್ಮೆ ಉದ್ಯಮ ನಿಗಮ (KSIC) ತಯಾರಿಸುವ ಸೀರೆಗಳಿಗೆ ಮಾತ್ರ ಬಳಸಲು ಕಾನೂನುಬದ್ಧ ಅವಕಾಶವಿದೆ. ಪ್ರತಿ ಸೀರೆಯ ಸೆರಗಿನ ಭಾಗದಲ್ಲಿ ಒಂದು ವಿಶಿಷ್ಟ ಕೋಡ್ (Unique Serial Number) ಮತ್ತು KSIC Hologram ಇರುತ್ತದೆ. ಇದನ್ನು ಬಳಸಿಕೊಂಡು ನೀವು ಆ ಸೀರೆ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಬಹುದು.
ಡಿಜಿಟಲ್ ವೇದಿಕೆಯಲ್ಲಿ ಮೈಸೂರು ಸಿಲ್ಕ್: ಇತ್ತೀಚಿನ ವರ್ಷಗಳಲ್ಲಿ ಮೈಸೂರು ಸಿಲ್ಕ್ ಸೀರೆಗಳಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ ಕಂಡುಬಂದಿದೆ. ಡಿಜಿಟಲ್ ವೇದಿಕೆಗಳ ಮೂಲಕ ದೇಶ-ವಿದೇಶಗಳಿಗೆ ನೇರ ಮಾರಾಟ ವ್ಯವಸ್ಥೆ ವಿಸ್ತರಿಸಲಾಗಿದೆ. ಹಾಗೂ ಯುವ ಪೀಳಿಗೆಗೆ ತಲುಪಲು ಹೊಸ ವಿನ್ಯಾಸಗಳು ಮತ್ತು ಲಘು ತೂಕದ ಮಾದರಿಗಳನ್ನು ಪರಿಚಯಿಸುವ ಕೆಲಸವೂ ನಡೆಯುತ್ತಿದೆ.
ಇದನ್ನೂ ಓದಿ: ಮಾರ್ಚ್ 3ಕ್ಕೆ ‘Blood Moon’: ಫಾಲ್ಗುಣ ಪೂರ್ಣಿಮೆಗೆ ಖಗೋಳ ಅದ್ಭುತ
ಆದರೆ ಇದೆಲ್ಲರ ಮದ್ಯೆ ಮೈಸೂರು ಸಿಲ್ಕ್ ಸೀರೆಗಳ ಮಾರಾಟ ನಿಂತುಹೋಗುತ್ತದೆ ಅಥವಾ ಕಾರ್ಖಾನೆ ಮುಚ್ಚುತ್ತದೆ ಎಂಬ ಮಾತುಗಳು ವದಂತಿಗಳು ಇತ್ತಿಚೆಗೆ ಹರಿದಾಡುತ್ತಿದೆ ಇದೆಲ್ಲರ ಸಮಗ್ರ ಚಿತ್ರಣವನ್ನು ಲೋಕ ಶಿಕ್ಷಣ ಟ್ರಸ್ಟ್‌ನ ಹೆಮ್ಮೆಯ ಮಾಸ ಪತ್ರಿಕೆಯಾದ ಕಸ್ತೂರಿಯ ಸಂಪಾದಕಿ ಶಾಂತಲಾ ಧರ್ಮರಾಜ್ ಈ ಕುರಿತಂತೆ ನಾಡಿನ ನೆಚ್ಚಿನ ಸಂಯುಕ್ತ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಲಿಂಕ್ ಬಳಸಿ ವಿಡಿಯೋ ನೋಡಿ https://www.youtube.com/watch?v=rrSnkI4Fgrc






















