ಹುಬ್ಬಳ್ಳಿ: ಕುಸುಗಲ್ ರಸ್ತೆಯ ಝಡೀಕೋ ಎಂಟರ್‌ಪ್ರೈಸಸ್ (ಐಎಫ್‌ಡಿ) ಮನೆ ಬಳಕೆಯ ಸಾಮಾನುಗಳ ಗೋದಾಮಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಕೋಟ್ಯಾಂತರ ರೂಪಾಯಿಯ ವಸ್ತುಗಳು ಸುಟ್ಟಿರುವ ಘಟನೆ ನಡೆದಿದೆ.
ಉಣಕಲ್‌ನ ನಿವಾಸಿಯಾಗಿರುವ ಮಾಲೀಕ ರವಿ ಜೈನ್ ಎಂಬುವರಿಗೆ ಸೇರಿದ ಎಲೆಕ್ಟ್ರಾನಿಕ್ ಗೋದಾಮಿನಲ್ಲಿ ಏಕಾಏಕಿ ಬೆಂಕಿ ತಗುಲಿದೆ. ಸ್ಥಳೀಯರು ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: ಸಂಭ್ರಮದ ಮನೆಯಲ್ಲಿ ಸೂತಕ: ಮದುವೆಗೆ ಮೊದಲೆ ಸೋದರಿಯರ ಆತ್ಮಹತ್ಯೆ
ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಕೋಟ್ಯಾಂತರ ರೂಪಾಯಿ ಎಲೆಕ್ಟ್ರಾನಿಕ್ ವಸ್ತುಗಳಿವೆ. ಆದರೆ ಎಷ್ಟು ನಷ್ಟವಾಗಿದೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.























