SK Home Ad
Home ಸುದ್ದಿ ವಿದೇಶ ವಿದೇಶದಲ್ಲಿ ಇನ್ನೊಬ್ಬ ಕನ್ನಡಿಗನ ನಿಗೂಢ ಸಾವು

ವಿದೇಶದಲ್ಲಿ ಇನ್ನೊಬ್ಬ ಕನ್ನಡಿಗನ ನಿಗೂಢ ಸಾವು

0
228

ಕಡಬ: ಕೆಲ ದಿನಗಳ ಹಿಂದೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗನೊಬ್ಬ ನಿಗೂಢವಾಗಿ ಮೃತಪಟ್ಟ ಬೆನ್ನಲ್ಲೇ ಮತ್ತೋರ್ವ ಕನ್ನಡಿಗ ವಿದೇಶದಲ್ಲಿ ಪ್ರಾಣ ಬಿಟ್ಟಿದ್ದಾನೆ.

ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕುಟ್ರಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನೀಲ್ (31) ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಡಬ್ಲಿನ್ ನಗರದ ಫಿಂಗ್ಲಾಸ್ ಪ್ರದೇಶದ ಚಾರ್ಲ್ಸ್‌ಟೌನ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಾಂಜೋ ಸುನೀಲ್, ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಸಿನಿಮಾ ಶೈಲಿಯಲ್ಲಿ ಬಂಗಾರ ಎಗರಿಸುತ್ತಿದ್ದ ಖತರ್‌ನಾಕ್‌ ಕಳ್ಳಿ ಅರೆಸ್ಟ್

ಮೂಲತಃ ಕಡಬದವರಾಗಿರುವ ಸುನೀಲ್ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಡಬ್ಲಿನ್​ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಅಥವಾ ಇದು ಹತ್ಯೆಯೇ? ಎನ್ನುವ ಬಗ್ಗೆ ಐರಿಶ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸದ್ಯ ಐರ್ಲೆಂಡ್ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸುನೀಲ್‌ ಸಾವಿನ ಕುರಿತು ನಿಖರ ಕಾರಣ ತಿಳಿದು ಬರಲಿದೆ.