Home Advertisement
Home ಸುದ್ದಿ ವಿದೇಶ ಜಾಗತಿಕ ಮಟ್ಟದಲ್ಲಿ Youtube ಸಮಸ್ಯೆ: ಬಳಕೆದಾರರ ಪರದಾಟ

ಜಾಗತಿಕ ಮಟ್ಟದಲ್ಲಿ Youtube ಸಮಸ್ಯೆ: ಬಳಕೆದಾರರ ಪರದಾಟ

0
52

ವಿಶ್ವದೆಲ್ಲೆಡೆ Youtube ಡೌನ್: ಲಕ್ಷಾಂತರ ಬಳಕೆದಾರರಿಗೆ ತಾಂತ್ರಿಕ ತೊಂದರೆ

ಬೆಂಗಳೂರು/ನವದೆಹಲಿ: ವಿಶ್ವದ ಪ್ರಮುಖ ವೀಡಿಯೊ ವೇದಿಕೆ ಯೂಟ್ಯೂಬ್ ಇಂದು ಬೆಳಗ್ಗೆ ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಿದ್ದು, ಲಕ್ಷಾಂತರ ಬಳಕೆದಾರರು ಸೇವಾ ಅಡಚಣೆಗೆ ಒಳಗಾಗಿದ್ದಾರೆ. ವಿಶ್ವಾದ್ಯಂತ ಸುಮಾರು 3.2 ಲಕ್ಷಕ್ಕೂ ಹೆಚ್ಚು ಬಳಕೆದಾರರು ಯೂಟ್ಯೂಬ್ ಬಳಕೆ ವೇಳೆ ಸಮಸ್ಯೆ ಎದುರಿಸಿದ್ದಾರೆ ಎಂದು ಸೇವಾ ಸ್ಥಗಿತವನ್ನು ಗಮನಿಸುವ Downdetector ವರದಿ ಮಾಡಿದೆ.

ಬೆಳಗ್ಗೆ ಇಂದಲೇ ಸಮಸ್ಯೆ ಆರಂಭ: ಇಂದು ಬೆಳಗ್ಗೆ 6:30 ರಿಂದ 7:30ರ ನಡುವೆ ಯೂಟ್ಯೂಬ್‌ನಲ್ಲಿ ಸಮಸ್ಯೆ ತೀವ್ರಗೊಂಡಿದ್ದು, ಸುಮಾರು 20,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇದರಲ್ಲಿ 74% ಅಪ್ಲಿಕೇಶನ್ ಸಮಸ್ಯೆಗಳಿಗೆ ಮತ್ತು 16% ವೀಡಿಯೊ ಸ್ಟ್ರೀಮಿಂಗ್ ಸಮಸ್ಯೆಗಳಿಗೆ ಸಂಬಂಧಿಸಿದ್ದವು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸಾವಿರಾರು ವಿದ್ಯಾರ್ಥಿಗಳ ಮಾರ್ಗದರ್ಶಕ ಡಾ. ರಾಘವೇಂದ್ರ ರಾವ್ ಇನ್ನಿಲ್ಲ

ಭಾರತ, ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವು ದೇಶಗಳಲ್ಲಿ ಬಳಕೆದಾರರು ಈ ಅಡಚಣೆಯಿಂದ ತೊಂದರೆ ಅನುಭವಿಸಿದ್ದಾರೆ. ಯೂಟ್ಯೂಬ್ ಆಪ್ ಓಪನ್ ಮಾಡಿದ ಕೂಡಲೇ ವಿಡಿಯೋ ಸರ್ಚ್ ಮಾಡಲು ಆಗದೆ, “Something went wrong” ಎಂಬ ಸಂದೇಶ ಕಾಣಿಸಿಕೊಂಡಿದೆ.

ಬಳಕೆದಾರರ ಅಸಮಾಧಾನ: ಬೆಳಗ್ಗೆ ಎದ್ದು ಯೂಟ್ಯೂಬ್ ಮೂಲಕ ಭಕ್ತಿಗೀತೆಗಳು, ಸುದ್ದಿಗಳು ಹಾಗೂ ಮನರಂಜನಾ ವಿಡಿಯೋಗಳನ್ನು ವೀಕ್ಷಿಸುವ ಅಭ್ಯಾಸವಿರುವ ಅನೇಕ ಮಂದಿಗೆ ಈ ಸಮಸ್ಯೆ ತೀವ್ರ ನಿರಾಸೆ ತಂದಿದೆ. ಯೂಟ್ಯೂಬ್ ಡೌನ್ ಆದ ಬೆನ್ನಲ್ಲೇ ಬಳಕೆದಾರರು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಮೀಮ್ಸ್, ಟ್ರೋಲ್‌ಗಳು ಹಾಗೂ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 45 ವರ್ಷಗಳ ಕೊಡುಗೆ ಏನು? ದೇಶಪಾಂಡೆಗೆ ಸುನೀಲ್ ಹೆಗಡೆ ಸವಾಲು

ಯೂಟ್ಯೂಬ್‌ನಿಂದ ಸ್ಪಷ್ಟನೆ: ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಯೂಟ್ಯೂಬ್ ಸಂಸ್ಥೆ, “ಈಗ ಯೂಟ್ಯೂಬ್ ಡೌನ್ ಆಗಿದೆ ಅಥವಾ ಕೆಲವು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಎಲ್ಲರಿಗೂ ಇದೇ ತೊಂದರೆ ಎದುರಾಗುತ್ತಿದೆ. ನಮ್ಮ ತಾಂತ್ರಿಕ ತಂಡಗಳು ಸಮಸ್ಯೆ ಸರಿಪಡಿಸುವ ಕಾರ್ಯದಲ್ಲಿ ತೊಡಗಿವೆ. ಶೀಘ್ರದಲ್ಲೇ ಅಪ್‌ಡೇಟ್ ನೀಡುತ್ತೇವೆ” ಎಂದು ತಿಳಿಸಿದೆ.

ಇತ್ತೀಚಿನ ಅಪ್‌ಡೇಟ್ ಪ್ರಕಾರ, ಯೂಟ್ಯೂಬ್ ಕಿಡ್ಸ್, ಯೂಟ್ಯೂಬ್ ಮ್ಯೂಸಿಕ್ ಸೇರಿದಂತೆ ಕೆಲವು ಸೇವೆಗಳಲ್ಲಿ ಸಮಸ್ಯೆ ಸರಿಯಾಗಿದ್ದು, ಉಳಿದ ಪ್ಲಾಟ್‌ಫಾರ್ಮ್‌ಗಳಲ್ಲೂ ಶೀಘ್ರದಲ್ಲೇ ಸಂಪೂರ್ಣ ಸೇವೆ ಪುನಃಸ್ಥಾಪನೆಯಾಗಲಿದೆ ಎಂದು ಸಂಸ್ಥೆ ಭರವಸೆ ನೀಡಿದೆ.

ಇದನ್ನೂ ಓದಿ: ಇಮ್ರಾನ್ ಖಾನ್ ಆರೋಗ್ಯಕ್ಕೆ ಜಾಗತಿಕ ಕ್ರಿಕೆಟ್ ದಿಗ್ಗಜರ ಬೆಂಬಲ

ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೊಡೆತ: ಈ ತಾಂತ್ರಿಕ ವೈಫಲ್ಯದಿಂದ ಅನೇಕ ಕಂಟೆಂಟ್ ಕ್ರಿಯೇಟರ್‌ಗಳಿಗೂ ತೊಂದರೆಯಾಗಿದೆ. ವಿಡಿಯೋ ಅಪ್‌ಲೋಡ್, ಲೈವ್ ಸ್ಟ್ರೀಮಿಂಗ್ ಮತ್ತು ಆದಾಯ ಸಂಬಂಧಿತ ಕಾರ್ಯಗಳಲ್ಲಿ ಅಡಚಣೆ ಉಂಟಾಗಿದ್ದು, ಆನ್‌ಲೈನ್ ಉದ್ಯಮಕ್ಕೂ ಪರಿಣಾಮ ಬೀರಿದೆ.

ಒಟ್ಟಾರೆ, ಯೂಟ್ಯೂಬ್ ಸೇವೆಯ ಜಾಗತಿಕ ವ್ಯತ್ಯಯವು ಡಿಜಿಟಲ್ ಜಗತ್ತಿನಲ್ಲಿ ಈ ವೇದಿಕೆಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Previous article45 ವರ್ಷಗಳ ಕೊಡುಗೆ ಏನು? ದೇಶಪಾಂಡೆಗೆ ಸುನೀಲ್ ಹೆಗಡೆ ಸವಾಲು
Next articleAI ಶೃಂಗಸಭೆ ವಿವಾದ: ರೋಬೋಟ್ ನಾಯಿಯ ಕುರಿತು ಗಾಲ್ಗೋಟಿಯಾಸ್ ವಿವಿ ಸ್ಪಷ್ಟನೆ