ಮಂಗಳೂರು: ನೇಪಾಳದಲ್ಲಿ ಕುಳಿತು ದೇಶದ ವಿವಿಧ ಭಾಗಗಳ ಜನರನ್ನು ಗುರಿಯಾಗಿಸಿಕೊಂಡು ನೂರಾರು ಕೋಟಿ ರೂ. ಮೌಲ್ಯದ ಸೈಬರ್ ವಂಚನೆ ನಡೆಸುತ್ತಿದ್ದ ಅಂತಾರಾಷ್ಟ್ರೀಯ ವಂಚಕರ ಜಾಲವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಪತ್ತೆಹಚ್ಚಿ, ಒಟ್ಟು 11 ಜನ ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ.
ಈ ವಂಚಕ ತಂಡದಲ್ಲಿ ಒಟ್ಟು 16 ಮಂದಿ ಭಾರತೀಯರು ಹಾಗೂ ಚೀನಾದ ಪ್ರಜೆಗಳು ಸೇರಿಕೊಂಡಿದ್ದು, ಚೀನಾದ ಆರೋಪಿತರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ 5 ಮಂದಿ ಭಾರತೀಯ ಆರೋಪಿತರು ತಲೆಮರಿಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಬೆಳಗಾವಿ: ಮಹಿಳಾ ಅಧಿಕಾರಿಗೆ ಹಿಡನ್ ಕ್ಯಾಮರಾ ಬ್ಲ್ಯಾಕ್‌ಮೇಲ್
624 ಬ್ಯಾಂಕ್ ಖಾತೆಗಳು – 4,580ಕ್ಕೂ ಹೆಚ್ಚು ಪ್ರಕರಣಗಳು ದಾಖಲು: ಬಂಧಿತರ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ, ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಿವೆ. ಈ ಖಾತೆಗಳ ವಿರುದ್ಧ NCRP Portal ನಲ್ಲಿ 4,580ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ.
ಒಂದು ಬ್ಯಾಂಕ್ ಖಾತೆಯಲ್ಲೇ ಸುಮಾರು ₹167 ಕೋಟಿ ಹಣ ವರ್ಗಾವಣೆಯಾಗಿದ್ದು, ಮಂಗಳೂರು ಸೆನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾತ್ರ 10 ಖಾತೆಗಳ ಮೂಲಕ ₹30.70 ಕೋಟಿ ಹಣ ವರ್ಗಾವಣೆ ಆಗಿರುವುದು ತನಿಖೆಯಿಂದ ತಿಳಿದುಬಂದಿದೆ. ಉಳಿದ ಖಾತೆಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಮೈಸೂರು: ಅಧಿಕಾರಿಗಳ ಮನೆ ಸೇರಿದಂತೆ ಏಳು ಕಡೆ ಲೋಕಾ ದಾಳಿ
ಪ್ರಕರಣದ ವಿವರ: ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಂದ ಸುಮಾರು ₹1.38 ಕೋಟಿ ಹಣವನ್ನು 10 ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಆರೋಪ ಈ ತಂಡದ ಮೇಲೆ ಇದೆ. ನೇಪಾಳದಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಈ ಜಾಲವನ್ನು ತಾಂತ್ರಿಕ ವಿಶ್ಲೇಷಣೆ ಮೂಲಕ ಪತ್ತೆಹಚ್ಚಲಾಗಿದೆ.
ವಂಚನೆಯ ಕಾರ್ಯವಿಧಾನ: ವಂಚಕರು ಎರಡು ತಂಡಗಳಾಗಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ.
ಮೊದಲ ತಂಡ (ನೇಪಾಳದಿಂದ ಕಾರ್ಯಾಚರಣೆ) ಸಾಮಾಜಿಕ ಜಾಲತಾಣದ ಮೂಲಕ ಏಜೆಂಟ್ ಹಾಗೂ ಖಾತೆದಾರರನ್ನು ನೇಮಕ ಮಾಡಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಹಾಗೂ USDT ರೂಪದಲ್ಲಿ ಪರಿವರ್ತಿಸಿ ವಿದೇಶಕ್ಕೆ ಕಳುಹಿಸುತ್ತಿತ್ತು.
ಇದನ್ನೂ ಓದಿ: ಮೈಸೂರು — ಸಿಗರೇಟ್ ಫೋಟೋಶೂಟ್ ವಿವಾದ: ಮತ್ತೆ ಸಂಕಷ್ಟದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್
ಎರಡನೇ ತಂಡ (ಕಾಂಬೋಡಿಯಾ, ದುಬೈ ಮುಂತಾದ ದೇಶಗಳಿಂದ) ಹೂಡಿಕೆದಾರರನ್ನು ಸಂಪರ್ಕ ಮಾಡಿ ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರ ಮೂಲಕ ಸ್ಥಳೀಯ ಭಾಷೆಯಲ್ಲಿ ಮೋಸ, ಹೆಚ್ಚಿನ ಲಾಭದ ಆಮಿಷ ನೀಡಿ ಹಣ ಸಂಗ್ರಹ. ಈ ಎರಡೂ ತಂಡಗಳ ಹಣದ ವ್ಯವಹಾರವನ್ನು ನೇಪಾಳದಲ್ಲಿರುವ ಮುಖ್ಯ ತಂಡ ನಿಯಂತ್ರಿಸುತ್ತಿತ್ತು.
ಬ್ಯಾಂಕ್ ಖಾತೆಗಳನ್ನು ಪಡೆದುಕೊಳ್ಳುವ ತಂತ್ರ: ವಂಚಕರು ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮೂಲಕ ನಕಲಿ ಜಾಹೀರಾತು ನೀಡಿ ವಿವಿಧ ಹುದ್ದೆಗಳಿಗೆ ಆಹ್ವಾನಿಸುತ್ತಿದ್ದರು. 5%–10% ಕಮಿಷನ್, ವಿದೇಶ ಪ್ರವಾಸ, ವಸತಿ ಸೌಲಭ್ಯ ನೀಡುವ ಆಮಿಷವೊಡ್ಡಿ ಯುವಕರನ್ನು ದುಬೈ, ನೇಪಾಳಕ್ಕೆ ಕರೆಸಿಕೊಳ್ಳುತ್ತಿದ್ದರು. ನಂತರ ಅವರ ಸಿಮ್ ಹಾಗೂ ಬ್ಯಾಂಕ್ ಖಾತೆಗಳನ್ನು ಬಳಸಿ ವಂಚನೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು.
ಇದನ್ನೂ ಓದಿ: NH-50ರಲ್ಲಿನ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ
ಹೂಡಿಕೆದಾರರನ್ನು ಆಕರ್ಷಿಸುವ ವಿಧಾನ: ವಾಟ್ಸಾಪ್, ಟೆಲಿಗ್ರಾಂ ಮೂಲಕ ಸಂಪರ್ಕ ಮಾಡಿ ನಕಲಿ ಅಪ್ಲಿಕೇಶನ್ ಮೂಲಕ ಲಾಭ ತೋರಿಸಿ ಪ್ರಾರಂಭದಲ್ಲಿ ಸ್ವಲ್ಪ ಹಣ ವಾಪಸ್ ನೀಡಿ ನಂಬಿಕೆ ಗಿಟ್ಟಿಸಿ ನಂತರ ಹೆಚ್ಚಿನ ಹೂಡಿಕೆಗೆ ಒತ್ತಾಯದ ಮೂಲಕ ಪ್ರತಿದಿನ ₹60 ಲಕ್ಷದಿಂದ ₹1 ಕೋಟಿ ವರೆಗೆ ವಂಚನೆ ನಡೆಯುತ್ತಿತ್ತು.
ಡಿಜಿಟಲ್ ಸ್ಲೇವರಿ ಕುರಿತು ಎಚ್ಚರಿಕೆ: ವಿದೇಶ ಉದ್ಯೋಗದ ಹೆಸರಿನಲ್ಲಿ ಯುವಕರನ್ನು ಮೋಸಗೊಳಿಸಿ, ಪಾಸ್‌ಪೋರ್ಟ್ ಕಬಳಿಸಿ, ಸೈಬರ್ ವಂಚನೆಗೆ ಬಳಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 6 ಮಂದಿಯನ್ನು ಈ ರೀತಿಯ ಸೈಬರ್ ಸ್ಲೇವರಿಯಿಂದ ರಕ್ಷಿಸಲಾಗಿದೆ.
ಇದನ್ನೂ ಓದಿ: ಮಾಲೂರು ಕ್ಷೇತ್ರ ಮರು ಮತ ಎಣಿಕೆಯಲ್ಲಿ ನಂಜೇಗೌಡ ಗೆಲುವು ದೃಢ
ಹಣ ವಾಪಸ್ ಸಿಗದಿರುವ ಕಾರಣ: ಹಣವನ್ನು ತಕ್ಷಣವೇ USDTಗೆ ಪರಿವರ್ತನೆ, ವಿದೇಶಕ್ಕೆ ಕಳುಹಿಸುವುದು, ದೂರು ನೀಡಲು ವಿಳಂಬ ಇವೇ ಪ್ರಮುಖ ಕಾರಣಗಳಾಗಿವೆ.
ಸೈಬರ್ ವಂಚನೆಗೆ ಪರಿಹಾರ ಕ್ರಮಗಳು: ಒಂದು ಗಂಟೆಯೊಳಗೆ 1930ಗೆ ಕರೆ, ತಕ್ಷಣ ಪೊಲೀಸ್ ದೂರು ನೀಡಿ. ನಕಲಿ ಲೋನ್, ಜಾಬ್, ಗೇಮ್ ಅಪ್‌ಗಳಿಂದ ದೂರ, OTP ಶೇರ್ ಮಾಡಬೇಡಿ, ನಕಲಿ ಅಧಿಕಾರಿಗಳ ವಿಡಿಯೋ ಕಾಲ್‌ಗೆ ಮರುಳಾಗಬೇಡಿ, ಗೂಗಲ್ ಕಸ್ಟಮರ್ ಕೇರ್ ನಂಬಬೇಡಿ.
























