ಬೀದರ್: ಔರಾದ್ ತಾಲೂಕಿನ ಜಮಲಪೂರ ಮರಾಠಿ ಮಾಧ್ಯಮದ ಸರಕಾರಿ ಶಾಲೆಯ 58 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದಾರೆ.
ಊಟ ಸೇವಿಸಿದ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡು ಕೆಲ ಕ್ಷಣದಲ್ಲಿ ವಾಂತಿ ಪ್ರಾರಂಭಗೊಂಡಿತು. ಶಿಕ್ಷಕರು 108 ಮತ್ತು ಇತರೆ ವಾಹನಗಳ ಸಹಾಯದಿಂದ ಮಕ್ಕಳನ್ನು ಔರಾದ್ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದಾರೆ.
ತಕ್ಷಣ ಆಸ್ಪತ್ರೆಗೆ ಕರೆತಂದಿದ್ದರಿಂದ ಎಲ್ಲ ಮಕ್ಕಳು ಚೇತರಿಸಿಕೊಂಡಿದ್ದಾರೆ. ಔರಾದ್ ಪೊಲೀಸ್ ಠಾಣೆ ಸಿಬ್ಬಂದಿ ದೂರು ದಾಖಲಿಸಿಕೊಂಡಿದ್ದಾರೆ. ಮೊದಲಿಗೆ ಹುಳಗಳು ಭರಿತ ಕಳಪೆ ಆಹಾರ, ಅಲ್ಲದೆ ಅಡುಗೆಯವರ ನಿಷ್ಕಾಳಜಿ ಮಾಡಿದ ಎಡವಟ್ಟಿನಿಂದ ಈ ಸಮಸ್ಯೆ ಎದುರಾಗಿರುವದು ಮೇಲ್ನೋಟಕ್ಕೆ ತಿಳಿದು ಬಂದಿದೆ.























