Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿ: ಡಿವೈಎಸ್ಪಿ ನಂದಾರೆಡ್ಡಿ ವರ್ಗಾವಣೆ

ಬಳ್ಳಾರಿ: ಡಿವೈಎಸ್ಪಿ ನಂದಾರೆಡ್ಡಿ ವರ್ಗಾವಣೆ

0
4

ಬಳ್ಳಾರಿ: ನಗರದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ ಆರೋಪದ ಕೇಂದ್ರ ಬಿಂದುವಾಗಿದ್ದ ನಗರ ಡಿವೈಎಸ್ಪಿ ಪಿ‌. ಚಂದ್ರಕಾಂತ್ ನಂದಾರೆಡ್ಡಿ ಅವರನ್ನು ಸ್ಥಳ ನಿಯುಕ್ತಿಗೊಳಿಸದೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ತೆರವಾಗಿರುವ ಸ್ಥಾನಕ್ಕೆ ನೂತನ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನಿಯೋಜಿಸಿದೆ. ಚಂದ್ರಕಾಂತ್ ನಂದಾರೆಡ್ಡಿ ಅವರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ನೂತನ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನಿಯೋಜಿಸುವ ಮೂಲಕ ಬ್ಯಾನರ್ ಗಲಾಟೆ ಸಂಬಂಧದ ರೆಡ್ಡಿ, ರಾಮುಲು ಆರೋಪಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ.

Previous articleಭೀಕರ ರಸ್ತೆ ಅಪಘಾತ: ಓರ್ವ ಯುವಕ ಸಾವು
Next articleದೋಣಿ ದುರಂತ: ಮತ್ತೊಬ್ಬಾಕೆ ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ