Home Advertisement
Home ಅಪರಾಧ ಕುಡಿಯಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಗ

ಕುಡಿಯಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಗ

0
125

ಕುಷ್ಟಗಿ: ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿಗೆ ಕುಡಿಯದಂತೆ ತಾಯಿ ಬುದ್ಧಿವಾದ ಹೇಳಿರುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಸಿಂಧನೂರು ತಾಲೂಕಿನ ವೀರಾಪೂರ ಗ್ರಾಮದ ಶ್ಯಾಮಣ್ಣ ಮಾದರ್ (೪೩) ಎನ್ನುವವ ಮೃತಪಟ್ಟಿದ್ದು ಈತನ ಶವ ಕುಷ್ಟಗಿ ತಾಲೂಕಿನ ತಾವರಗೇರಾ ಸೀಮಾದಲ್ಲಿ ಕೊಳತಸ್ಥಿತಿಯಲ್ಲಿ ಪತ್ತೆಯಾಗಿದೆ.
ಮದ್ಯ ಸೇವನೆ ಮಾಡದಂತೆ ಮೃತಪಟ್ಟ ವ್ಯಕ್ತಿಯ ತಾಯಿ ದೇವಮ್ಮಳ ಸಾಕಷ್ಟು ಸಲ ಬುದ್ಧಿವಾದ ಹೇಳಿದ್ದಾಳೆ ಇದರಿಂದಾಗಿ ವ್ಯಕ್ತಿ ಮನನೊಂದು ಡಿಸೆಂಬರ್ 29ರಂದು ಮನೆ ಬಿಟ್ಟು ಹೋಗಿದ್ದಾನೆ. ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮೃತಪಟ್ಟ ವ್ಯಕ್ತಿಯ ತಾಯಿ ಮತ್ತು ಸಂಬಂಧಿಕರು ಜ. 1ರಂದು ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.