ಹುಬ್ಬಳ್ಳಿ: ದೇಶದಲ್ಲಿ ಎಲ್ಲೂ ಇರದ ರಾಜಕೀಯ ಅಸ್ಥಿರತೆ ಕರ್ನಾಟಕದಲ್ಲಿದೆ. ಸಿಎಂ ಹಾಗೂ ಡಿಸಿಎಂ ಇಬ್ಬರು ಒಬ್ಬರನ್ನೊಬ್ಬರು ಬಾವಿಗೆ ದೂಡಬೇಕು ಎಂದುಕೊಂಡಿದ್ದಾರೆ. ಕದನವಿರಾಮಕ್ಕಿಂತ ಮುಸುಕಿನ ಗುದ್ದಾಟ ಮುಂದುವರೆದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ರವಿವಾರ ಮಾಧ್ಯಮಮದವರೊಂದಿಗೆ ಮಾತನಾಡಿ, ಸಿದ್ದು-ಡಿಕೆಶಿ ನಡುವೆ ಮೇಲ್ನೋಟಕ್ಕೆ ಕದನ ವಿರಾಮವಾಗಿದೆ. ಮುಸುಕಿನ ಗುದ್ದಾಟ ಮಾತ್ರ ಮುಂದುವರಿದಿದೆ. ದೇಶದಲ್ಲಿ ಎಲ್ಲೂ ಇರಲಾರದ ರಾಜಕೀಯ ಅಸ್ಥಿರತೆ ಕರ್ನಾಟಕದಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಭಯಂಕರ ಭ್ರಷ್ಟಾಚಾರದಿಂದ ಜನತೆ ತತ್ತರಿಸಿದ್ದಾರೆ. ಅಧಿಕಾರಿಗಳಿಂದ ಬೇಕಾಬಿಟ್ಟಿ ಆಡಳಿತ ನಡೆದಿದೆ. ಹಣಕಾಸಿನ ಸ್ಥಿತಿ ದಯನೀಯವಾಗಿದೆ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಉಪಹಾರ ಮಾಡಿದ್ದಾರೆಯೇ ಹೊರತು ಒಪ್ಪಂದವಾಗಿಲ್ಲ. ಹೈಕಮಾಂಡ್ ತೀರ್ಮಾನ ಎಂದು ಹೇಳಲು ಅರ್ಧ ಇಡ್ಲಿ ತಿನ್ನಬೇಕಿತ್ತಾ ಎಂದು ಲೇವಡಿ ಮಾಡಿದರಲ್ಲದೇ, ಎರಡೂ ಕಡೆಯಿಂದಲೂ ಶಾಸಕರ ಖರೀದಿಗೆ ಮುಖಂಡರು ಮುಗಿಬಿದಿದ್ದಾರೆ.
ಎರಡೂವರೆ ವರ್ಷ ಆಗಿದೆ, ಬಿಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಬಹುದಿತ್ತು. ಸಿದ್ದರಾಮಯ್ಯ ಹಿರಿಯರಿದ್ದಾರೆ ಅವರೇ ಮುಂದುವರೆಯಲಿ ಎಂದು ಡಿ.ಕೆ. ಶಿವಕುಮಾರ್ ಹೇಳಬಹುದಿತ್ತು. ಹೀಗೆ ಮಾಡಿದ್ದರೇ ಅದು ಆಲ್ ಇಸ್ ವೆಲ್ ಎನ್ನಬಹುದಿತ್ತು. ಆದರೆ ಮೊದಲಿನಿಂದಲೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎನ್ನುತ್ತಾ ಬಂದಿದ್ದಾರೆ ಎಂದರು.
ಹೈಕಮಾಂಡ್ ಕೂಡ ಅಸಹಾಯಕವಾಗಿದ್ದಾರೆ. ಸ್ವತಃ ಮಲ್ಲಿಕಾರ್ಜುನ ಖರ್ಗೆಯವರು ತಾವೇ ಹೈಕಮಾಂಡ್ ಎನ್ನುವುದನ್ನು ಮರೆತಿದ್ದಾರೆ. ಹೈಕಮಾಂಡ್ ಯಾರು ಎನ್ನುವುದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊತ್ತಿದೆ. ನಕಲಿ ಗಾಂಧಿ ಹಾಗೂ ವಾದ್ರಾ ಅವರದ್ದೇ ಕಾಂಗ್ರೆಸ್‌ನಲ್ಲಿ ನಡೆಯುತ್ತದೆ ಎಂದು ಕುಟುಕಿದರು.
ಕಾಂಗ್ರೆಸ್ ಹೈಕಮಾಂಡ್‌ಗೆ ಕಮಾಂಡ್ ಇದ್ದರೇ ತಕ್ಷಣ ಗುದ್ದಾಟ ನಿಲ್ಲಿಸಬೇಕು. ಕರ್ನಾಟಕಕ್ಕೆ ಸುಸ್ಥಿರ ಪರಿಹಾರ ನೀಡಬೇಕು. ನಿಮಗೆ ಆಗದೆ ಹೋದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಲಿ, ಸಮೃದ್ಧ ರಾಜ್ಯದಲ್ಲಿ ಇದು ಒಳ್ಳೆಯದಲ್ಲ ಎಂದರು.























Okay, so Jilibetrealmoneyplatform… this HAS to be legit, right? I’m tired of wasting money! Let’s see if this turns into real cash.Wish me luck! Try your luck here: jilibetrealmoneyplatform