SK Home Ad
Home ತಾಜಾ ಸುದ್ದಿ ಇಎಂಐ ಪಾವತಿದಾರರಿಗೆ ಆರ್‌ಬಿಐ ಸಿಹಿ ಸುದ್ದಿ

ಇಎಂಐ ಪಾವತಿದಾರರಿಗೆ ಆರ್‌ಬಿಐ ಸಿಹಿ ಸುದ್ದಿ

0
140

ನವದೆಹಲಿ: ರೆಪೊ ದರ ಶೇ 6.5ರಷ್ಟಿದ್ದು, ಅದನ್ನು ಹಾಗೆಯೇ ಇರಿಸುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಹಣದುಬ್ಬರವನ್ನು ನಿಯಂತ್ರಿಸುವ ದೃಷ್ಟಿಯಿಂದ ಸತತ ಆರನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ನಿರ್ಧರಿಸಿದೆ. ಕಳೆದ ವಾರ ಮಂಡನೆಯಾದ ಮಧ್ಯಂತರ ಬಜೆಟ್ ಬಳಿಕ ಪ್ರಕಟಿಸಿದ ಮೊದಲ ದ್ವೈಮಾಸಿಕ ನೀತಿ ಇದಾಗಿದೆ.