Home Advertisement
Home ತಾಜಾ ಸುದ್ದಿ ರಾಯಚೂರು: ದಾಖಲೆಗಳಿಲ್ಲದ 32.42 ಲಕ್ಷ ಹಣ ಜಪ್ತಿ

ರಾಯಚೂರು: ದಾಖಲೆಗಳಿಲ್ಲದ 32.42 ಲಕ್ಷ ಹಣ ಜಪ್ತಿ

0
226
ಹಣ

ರಾಯಚೂರು: ಜಿಲ್ಲೆಯಾದ್ಯಂತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 32.42 ಲಕ್ಷ ಹಣವನ್ನು ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ಮತ್ತು ಶನಿವಾರ ನಡೆದಿದೆ.
ಶುಕ್ರವಾರ ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ ರಾಜ್ಯ ಮೂಲದ ದುರ್ಯೋಧನ ಭಾಟು ಪಾಟೀಲ್ ಅವರು ದಾಖಲೆಗಳಲ್ಲಿದ 3,36,800 ರೂ., ರಾಯಚೂರು ನಗರದ ಗಂಜ್ ಏರಿಯಾದ ನಿವಾಸಿ ಆಶೀಸ್ ಕುಮಾರ ಅವರ 4,05,827 ರೂ.ಗಳು, ರವಿ ಲಕ್ಷ್ಮಣ ಎಂಬುವವರ 5 ಲಕ್ಷ ರೂ.ಗಳು, ಹಾವೇರಿ ಜಿಲ್ಲೆಯ ರವಿಗುಡ್ಡಪ್ಪ ಎಂಬುವವರ 1,20 ಲಕ್ಷ ರೂ.ಗಳು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೇ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 20 ಲಕ್ಷ ರೂ.ಗಳನ್ನು ವಶಪಡಿಸಿಕೊಂಡು ಆದಾಯ ತೆರಿಗೆ ಇಲಾಖೆಗೆ ವಹಿಸಲಾಗಿದೆ. ಜಿಲ್ಲೆಯಾದ್ಯಂತ ಮಾನ್ವಿ, ರಾಯಚೂರು ನಗರ ಹಾಗೂ ಗ್ರಾಮೀಣ ದೇವದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲೆಗಳಿಲ್ಲದ ಒಟ್ಟು 32,42,627 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ಜಿಪಂ ಸಿಇಒ ಶಶಿಧರ ಕುರೇರ ತಿಳಿಸಿದ್ದಾರೆ.