SK Home Ad
Home ಸುದ್ದಿ ಕೊನೆಗೂ ಆಶಾ ಆದೇಶ ಪ್ರಕಟ; ಗುಲಾಬಿ ಸೇನೆ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ

ಕೊನೆಗೂ ಆಶಾ ಆದೇಶ ಪ್ರಕಟ; ಗುಲಾಬಿ ಸೇನೆ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ

0
8

ಬೆಂಗಳೂರು: ಸತತ 13 ದಿನಗಳ ಹೋರಾಟದ ಬಳಿಕ ಆಶಾ ಕಾರ್ಯರ್ತೆಯರಿಗೆ ಕೊನೆಗೂ ಇಂದು ಜಯ ಸಿಕ್ಕದೆ. ಸಿಎಂ ಡಿ.ಕೆ. ಶಿವಕುಮಾರ್‌ ನಿನ್ನೆ ಸಭೆಯಲ್ಲಿ ಅಧಿವೇಶನದಲ್ಲಿ ಚರ್ಚಿಸಿ ಮಾಸಿಕ 2000 ರೂ ಹೆಚ್ಚಿಸುವುದಾಗಿ ಭರವಸೆ ನೀಡಿದರು, ಆದರೆ ರಾಜ್ಯ ಸರ್ಕಾರ ಇಂದು  ಲಿಖಿತ ಆದೇಶ ಹೊರಡಿಸಿದೆ.

ನ.17 ರಿಂದ ನಡೆಯುತ್ತಿರುವ ಗುಲಾಬಿ ಪಡೆಗೆ ಇಂದು ಜಯ ಸಿಕ್ಕಿದೆ, ನಿನ್ನೆ ಬೆಳ್ಳಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ಜೋತೆ ಸಭೆ ವಿಫಲವಾದ ಬಳಿಕ ಮತ್ತೆ ಮಧ್ಯಾಹ್ನ 3 ಗಂಟೆಯ ಸಿಎಂ ನೇತೃತ್ವದ ಸಭೆಯಲ್ಲಿ 2000 ರೂ ಗೌರವಧನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಭಟನೆ ಇಲ್ಲಿಗೆ ಮುಕ್ತಾಯವೆಂದು ತಿಳಿದು ಆಶಾ ಕಾರ್ಯರ್ತೆಯರು ಸಿಎಂ ಡ.ಕೆ.ಶಿವಕುಮಾರ್‌ ಅವರಿಗೆ ಸನ್ಮಾನ ಮಾಡಿದರು.

 ಆದರೆ ಮತ್ತೆ ಆಶಾಗಳು ಲಿಖಿತ ಆದೇಶ ಪ್ರಕಟಪಡಿಸಬೇಕು ಎಂದು  ಮತ್ತೆ ಹೋರಾಟ ಮುಂದುವರೆಸಿದರು. ಇದಿಗ ರಾಜ್ಯ ಸರ್ಕಾರ ಲಿಖಿತ ಆದೇಶ ಪ್ರಕಟಿಸಿ ಆಶಾ ಹೋರಾಟಕ್ಕೆ ಕೊನೆಯದಾಗಿ ಪೂಲ್‌ ಸ್ಟಾಪ್‌ ನೀಡಿದೆ.

ಸರ್ಕಾರ ಅಧಿವೇಶನಕ್ಕೂ ಮುನ್ನ ಈ ಹೋರಾಟ ಆಶಾ ಕಾರ್ಯರ್ತೆಯರು ಕೈಬಿಡುವುದು ಮಹತ್ವದ್ದಾಗಿತ್ತು ನಾಳೆ ನಡೆಯುವ ಅಧಿವೇಶನದಲ್ಲಿ ಈ ವಿಷಯ ಮತ್ತೆ ಗಂಭಿರ ಚರ್ಚೆಯ ವಿಷಯಯಾಗಬಾರದು ಎಂಬ ಕಾರಣಕ್ಕೆ ಇಂದು ತಕ್ಷಣ ಆದೇಶ ನೀಡಿದೆ ಎಂದು ವರದಿಯಾಗಿದೆ.

ಕೊನೆಗೂ ಗುಲಾಬಿ ಪಡೆಯ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಇಂದು ತಮ್ಮ ಚಳಿಯ ನಡುವಿನ 13 ದಿನಗಳ ಹೋರಾಟಕ್ಕೆ ಜಯಬೇರಿಯಾಗಿದ್ದಾರೆ.