SK Home Ad
Home ಸುದ್ದಿ ತಮಿಳನಾಡಿನ ದೀಪತೂನ್‌ ವಿವಾದ; ಸುಪ್ರೀಂ ಆದೇಶ ಬೆನ್ನಲ್ಲೇ  ಪ್ರಧಾನಿ ಮೋದಿ ಪೋಸ್ಟ್‌;  ಹೊಸ ಚರ್ಚೆ  

ತಮಿಳನಾಡಿನ ದೀಪತೂನ್‌ ವಿವಾದ; ಸುಪ್ರೀಂ ಆದೇಶ ಬೆನ್ನಲ್ಲೇ  ಪ್ರಧಾನಿ ಮೋದಿ ಪೋಸ್ಟ್‌;  ಹೊಸ ಚರ್ಚೆ  

0
12

ನವದೆಹಲಿ: ತಮಿಳನಾಡಿನ ಮಥುರೈನಲ್ಲಿರುವ ತಿರುಪ್ಪರಕುಂಡ್ರಮ್‌  ಬಟ್ಟದ ವಿವಾದಿತ ದೀಪತೂನ್‌ ಸ್ತಂಭದಲ್ಲಿ ಕಾರ್ತಿಕ್‌ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್‌ ಮುರಗನ್‌ ಗೆ ಪ್ರಾರ್ಥನೆ ಸಲ್ಲಿಸಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನ್ನು ಹಿಂದಿ, ಇಂಗ್ಲಿಷ್‌ ಹಾಗೂ ತಮಿಳು ಭಾಷೆಗಳಲ್ಲಿ” ವೇಂಟ್ರಿವೇಲ್‌ ಮುರುಗನಕ್ಕು ಅರೋಗರಾ” ಎಂದು ಹಂಚಿಕೊಂಡಿದ್ದಾರೆ. ಇದರ ಅರ್ಥ ‘ಭಗವಾನ್ ಮುರುಗನಿಗೆ ಜಯವಾಗಲಿ’ ಎಂದಾಗಿದೆ. ಪ್ರಧಾನಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ನವೆಂಬರ್ 24ರಂದು ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ದೀಪತೂನ್‌ನಲ್ಲಿ ದೀಪ ಬೆಳಗಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ಈ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ತಮಿಳುನಾಡು ಸರ್ಕಾರದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನವೆಂಬರ್ 28ರಂದು ದೀಪತೂನ್‌ನಲ್ಲಿ ದೀಪ ಬೆಳಗಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಭಕ್ತರು ದೀಪ ಬೆಳಗಿಸಲು ಅವಕಾಶ ಕಲ್ಪಿಸಬೇಕು ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ. ದರ್ಗಾದಿಂದ ಕನಿಷ್ಠ 50 ಮೀಟರ್ ಅಂತರ ಕಾಯ್ದುಕೊಂಡು ದೀಪ ಬೆಳಗಿಸಲು ನಿರ್ದೇಶನ ನೀಡಲಾಗಿದೆ.

ದೇವಾಲಯದ ಆಡಳಿತ ಮಂಡಳಿ ಅಮಾನತು

ನ್ಯಾಯಾಲಯದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿಯ ಕಾರ್ಯಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ದೇವಾಲಯದ ಆಡಳಿತ ನಿರ್ವಹಣೆಗೆ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದಿನಾಥನ್ ಮತ್ತು ವಿ. ಪಾರ್ಥಿಬನ್ ಅವರನ್ನು ರಿಸೀವರ್‌ಗಳಾಗಿ ನೇಮಿಸಿದೆ. ಬೆಟ್ಟದ ಭದ್ರತೆಯ ಜವಾಬ್ದಾರಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಗೆ ವಹಿಸಲಾಗಿದೆ.

ಕಾರ್ತಿಕ ದೀಪೋತ್ಸವಕ್ಕೆ ಸಂಬಂಧಿಸಿದ ಈ ಬೆಳವಣಿಗೆ ತಮಿಳುನಾಡಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.