SK Home Ad
Home ನಮ್ಮ ಜಿಲ್ಲೆ ಬೀದರ್ ಬಸವ ಕಲ್ಯಾಣದಲ್ಲೇ ಪ್ರತ್ಯೇಕ ಧರ್ಮದ ಕಿಡಿ: ವಿಜಯೇಂದ್ರಗೆ ಧಿಕ್ಕಾರ

ಬಸವ ಕಲ್ಯಾಣದಲ್ಲೇ ಪ್ರತ್ಯೇಕ ಧರ್ಮದ ಕಿಡಿ: ವಿಜಯೇಂದ್ರಗೆ ಧಿಕ್ಕಾರ

0
41

ಬಸವ ಕಲ್ಯಾಣ: ಸರಕಾರದ ಸವಲತ್ತುಗಳಿಗಾಗಿ ಪ್ರತ್ಯೇಕ ಧರ್ಮದ ಚಿಂತನೆ ಮಾಡದೆ, ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕಿದೆ. ನಾವೆಲ್ಲರೂ ಹಿಂದೂ, ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಮುಂದೆ ಸಾಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬಸವ ಕಲ್ಯಾಣದಲ್ಲಿ ನಡೆದ ಅನುಭವ ಮಂಟಪ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವೆಲ್ಲರೂ ಆ ಜಾತಿ, ಈ ಜಾತಿ, ಆ ಧರ್ಮ, ಈ ಧರ್ಮ ಎಂದು ಭೇದಭಾವ ಮಾಡದೆ ಮನುಷ್ಯರಾಗಿ, ಮನುಷ್ಯ ಧರ್ಮದವರಾಗಿರಬೇಕು. ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಸರಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶದಿಂದ ಪ್ರತ್ಯೇಕ ಧರ್ಮದ ಚಿಂತನೆ ಮಾಡುವುದು ಬೇಡ. ನಾವೆಲ್ಲರೂ ಒಂದಾಗಿ ಮುಂದೆ ಸಾಗುವ ಅನಿವಾರ್ಯತೆ ಮತ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಭಾಷಣಕ್ಕೆ ಬಸವ ಭಕ್ತರ ಆಕ್ರೋಶ: ವಿಜಯೇಂದ್ರ ಅವರ ಈ ಹೇಳಿಕೆಗೆ ಕಾರ್ಯಕ್ರಮದಲ್ಲಿ ವಿರೋಧ ವ್ಯಕ್ತವಾಯಿತು. ಅವರ ಭಾಷಣ ಮುಗಿಯುತ್ತಿದ್ದಂತೆ ಬಸವ ಭಕ್ತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ವಿಜಯೇಂದ್ರ ನೀಡಿದ ಹೇಳಿಕೆ ಕಾರ್ಯಕ್ರಮದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದ ಅನುಭವ ಮಂಟಪ ಉತ್ಸವದಲ್ಲೇ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ವಿಜಯೇಂದ್ರ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.