SK Home Ad
Home ಸುದ್ದಿ ರಾಜ್ಯ ಉತ್ತರ ಕರ್ನಾಟಕ ಶಾಸಕರು ಉಂಡು 18 ತಾಸು ಮಲಗಿದ್ರೆ ಅಭಿವೃದ್ಧಿ ಸಾಧ್ಯವೇ?

ಉತ್ತರ ಕರ್ನಾಟಕ ಶಾಸಕರು ಉಂಡು 18 ತಾಸು ಮಲಗಿದ್ರೆ ಅಭಿವೃದ್ಧಿ ಸಾಧ್ಯವೇ?

0
4

ಕೊಪ್ಪಳ: ಉತ್ತರ ಕರ್ನಾಟಕದ ಶಾಸಕರು ಊಟ ಮಾಡಿಕೊಂಡು 18 ತಾಸು ಮಲಗಿದರೆ ಈ ಭಾಗದ ಜಿಲ್ಲೆಗಳ ಅಭಿವೃದ್ಧಿ ಸಾಧ್ಯವೇ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಜಿಲ್ಲೆಗಳು ಪ್ರತ್ಯೇಕ ರಾಜ್ಯವಾಗಬೇಕು ಎಂದು ಬಾಲಚಂದ್ರ ಜಾರಕಿಹೊಳಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಎಲ್ಲ ಪ್ರಾಂತಗಳನ್ನು ಸೇರಿಸಿ, ಅಖಂಡ ಇರ ಬೇಕೆಂದು ಕರ್ನಾಟಕ ರಾಜ್ಯ ರಚನೆ ಮಾಡಲಾಗಿದೆ ಎಂದರು.

ಅದು ವೈಯಕ್ತಿಕ ಅಭಿಪ್ರಾಯ. ಜನರ ಅಭಿಪ್ರಾಯ ಅಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಆಗದಿರುವುದಕ್ಕೆ ರಾಜಕಾರಣಿಗಳ ವೈಫಲ್ಯವೂ ಇದೆ. ಹೋರಾಟ ಮಾಡಿಯಾದರೂ ಅನುದಾನ ತರಬೇಕು. ಕೆಲಸ ಮಾಡಬೇಕು. ಉತ್ತರ ಕರ್ನಾಟಕದವರೇ ಸಿಎಂ ಆಗಿದ್ದರೂ ಅಭಿವೃದ್ಧಿ ಆಗಬೇಕಲ್ಲವೇ, ಉತ್ತರದ ದೊಡ್ಡ ಯೋಜನೆಗೆ ಒತ್ತಡ ತಂದು, ಪರಿಹಾರ ಕಂಡುಕೊಳ್ಳಬೇಕು ಎಂದರು.

ರಮೇಶ ಜಾರಕಿಹೊಳಿ ಬ್ರಹ್ಮನಾ?: ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವನೇನು ಬ್ರಹ್ಮನಾ?. ಗೆಲ್ಲಿಸುವುದು, ಸೋಲಿಸುವುದು ಮತದಾರ ಪ್ರಭುಗಳು. ಹಾದಿ-ಬೀದಿಲಿ ಹೋಗುವವರು ಹೇಳಿದರೆ ಉಪಯೋಗವಿಲ್ಲ. ನಮ್ಮದೇನು ಇಂಡಿಯಾ-ಪಾಕಿಸ್ತಾನ ಬಾರ್ಡರಾ?. ಯಾರು ಯಾವಕ್ಷೇತ್ರಕ್ಕೆ ಬೇಕಾದರೂ ಹೋಗಬಹುದು. ನಮ್ಮಕ್ಷೇತ್ರಕ್ಕೆ ಬಂದು, ಹೇಳಿದರೆ ಏನು ಮಾಡುವುದು ಎಂದರು.