SK Home Ad
Home ಸುದ್ದಿ ಆಶಾ ಕಾರ್ಯರ್ತೆಯರ ಹೋರಾಟಕ್ಕೆ ಸಂಜೆ 3 ಗಂಟೆಗೆ ಸಿಎಂ ಕಡೆಯಿಂದ ಮಹತ್ವದ ಸಭೆ| ಕೆಲಸಕ್ಕೆ ತಕ್ಕಂತೆ...

ಆಶಾ ಕಾರ್ಯರ್ತೆಯರ ಹೋರಾಟಕ್ಕೆ ಸಂಜೆ 3 ಗಂಟೆಗೆ ಸಿಎಂ ಕಡೆಯಿಂದ ಮಹತ್ವದ ಸಭೆ| ಕೆಲಸಕ್ಕೆ ತಕ್ಕಂತೆ ಇನ್ಸೆಟಿವ್ ನೀಡಲು ಆರೋಗ್ಯ ಇಲಾಖೆ ನಿರ್ಧಾರ

0
4

ಬೆಂಗಳೂರು: ಮಾಸಿಕ ಗೌರವಧನ 15000 ರೂ. ಮತ್ತು ವಿವಿಧ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆ ನಡೆಸಿಸುತಿಇರುವ ಆಶಾ ಕಾರ್ಯಕರ್ತೆಯರ ಹೋರಾಟ ಇಂದು 10 ನೇ ಕಾಲಿಟ್ಟಿದ್ದು, ಸಿಎಂ ಡಿ.ಕೆ.ಶಿವಕುಮಾರ್ ನತೃತ್ವದಲ್ಲಿ 3 ಗಂಟೆಗೆ ತುರ್ತು ಸಭೆಯನ್ನು ಕರೆದಿದ್ದಾರೆ. ಇನ್ನು ಆರೋಗ್ಯ ಇಲಾಖೆ ಕೆಲಸಕ್ಕೆ ತಕ್ಕಂತೆ ಇನ್ಸೆಟಿವ್ ಹೆಚ್ಚಳ ನೀಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ.

ಈ ಪ್ರತಿಭಟನೆ ಕುರಿತು ಇಂದು ಸಂಜೆ 3 ಗಂಟೆಗೆ ಸಿಎಂ ನೇತೃತ್ವದ ತುರ್ತು ಸಭೆಯನ್ನು ಕೆರದಿದ್ದಾರೆ, ಈ ಸಭೆಯಲ್ಲಿ ಆಶಾ ಕಾರ್ಯರ್ತೆಯರ ಹೋರಾಟಕ್ಕೆ ಜಯ ಸಿಗುತ್ತಾ ಅಥವಾ ಅವರಿಗೆ ಕಾರ್ಯದ ಸಂಬಳ ಸಿಗುತ್ತಾ ಎಂಬುದು ಈ ಸಭೆಯಲ್ಲಿ ತಿಳಿಯಲಿದೆ. ಇನ್ನು ಆಶಾ ಕಾರ್ಯರ್ತೆಯರ ಕೆಲಸಕ್ಕೆ ತಕ್ಕಂತೆ ಇನ್ಸೆಟಿವ್ ಹೆಚ್ಚಳ ನೀಡಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ.

ಸುಮಾರು 10 ದಿನಗಳಿಂದ ಮಳೆ, ಚಳಿ ಅನ್ನು ಲೆಕ್ಕಿಸದೆ ಪುಟಾಣಿ ಮಕ್ಕಳೊಂದಿಗೆ ನಡೆಸುತ್ತಿರುವ ಪ್ರತಿಭಟನೆಗೆ ಚಿತ್ರನಟ ಮತ್ತು ನಟಿಯರು ಬೆಂಬಲ ನೀಡುತ್ತಿದ್ದಾರೆ.
ಮಳೆಯ ನಡುವೆಯೂ ಧರಣಿ ನಡೆಸುತ್ತಿರುವ ಕುರಿತು ಮಾತನಾಡಿರುವ ಆಶಾ ಕಾರ್ಯಕರ್ತೆಯರು, ಮಳೆಯು ತಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದೆ ಎಂದು ಭಾವಿಸಿದ್ದಾರೆ. ಈ ಹಿಂದೆಯೂ ಇದೇ ರೀತಿ ಮಳೆ ಸುರಿದಾಗ ಕಾಂಗ್ರೆಸ್ ಸರ್ಕಾರವು ತಮಗೆ ಮಾಸಿಕ ಗೌರವಧನ ಪ್ರಕಟಿಸಿತ್ತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ತಿಂಗಳಿಗೆ 15,000 ರೂಪಾಯಿ ಗೌರವಧನವನ್ನು ವೇತನವಾಗಿ ನೀಡಬೇಕೆಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

ಫ್ರೀಡಂ ಪಾರ್ಕ್ನಲ್ಲಿ ಕೊರೆಯುವ ಚಳಿ, ಗಾಳಿ ಹಾಗೂ ಕುಡಿಯುವ ನೀರು, ಶೌಚಾಲಯ ಮತ್ತು ವಿಶ್ರಾಂತಿ ವ್ಯವಸ್ಥೆಗಳ ಕೊರತೆಯ ನಡುವೆಯೇ ಹಗಲು-ರಾತ್ರಿ ಧರಣಿ ನಡೆಸುತ್ತಿರುವುದರಿಂದ ಹಲವರ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಜ್ವರ, ಉಸಿರಾಟದ ತೊಂದರೆ (ಅಸ್ತಮಾ), ವಾಕರಿಕೆ ಮತ್ತು ಅತಿಸಾರದಿಂದ ಬಳಲಿದ 17 ಕಾರ್ಯಕರ್ತೆಯರನ್ನು ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇನ್ನು ಇನ್ಸೆಟಿವ್ ಹೆಚ್ಚಳಕ್ಕೆ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇವತ್ತಿನ ಸಭೆಯ ನಿರ್ಧಾರ ಆಶಾ ಕರ್ಯರ್ತೆಯರಿಗೆ ಆಶಾ ಅಥವಾ ನಿರಾಶಾನಾ ಎಂಬುದು ಕುತುಹಲ ಮೂಡಿಸಿದೆ.