ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ; ಮೂಡಿಗೆರೆಯಲ್ಲಿ ಹೋರಾಟಗಾರರ ಆಕ್ರೋಶ
ಚಿಕ್ಕಮಗಳೂರು: ಕಾಡಾನೆಗಳನ್ನು ಮೂಡಿಗೆರೆ ತಾಲೂಕಿನ ತತ್ಕೊಳ ಅರಣ್ಯದ ಮೂಲಕ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ವಿರೋಧಿಸಿ ಬುಧವಾರ ಮೂಡಿಗೆರೆ ಪಟ್ಟಣದಲ್ಲಿ ಬಂದ್ ಆಚರಿಸಲಾಯಿತು.
ಬಂದ್‌ಗೆ ವಿವಿಧ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬೆಳಗ್ಗೆಯಿಂದಲೇ ಪಟ್ಟಣದ ಲಯನ್ಸ್ ವೃತ್ತದ ಬಳಿ ಹೋರಾಟಗಾರರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಕಾಫಿ ಗಿಡಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರಲ್ಲಿ ರಸ್ತೆ ತಡೆ ನಡೆಸಿ, ಕಾಡಾನೆಗಳ ಸ್ಥಳಾಂತರ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕೆಂದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಕಾಡಾನೆಗಳ ಸ್ಥಳಾಂತರ ವಿಚಾರದಲ್ಲಿ ಸರ್ಕಾರದ ನಿಲುವನ್ನು ಖಂಡಿಸಿದ ಪ್ರತಿಭಟನಾಕಾರರು, ಸಚಿವ ಶಿವಲಿಂಗೇಗೌಡ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು.
ಕಾಡಾನೆಗಳ ಸ್ಥಳಾಂತರದಿಂದ ಮೂಡಿಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ ಹೋರಾಟಗಾರರು, ಸ್ಥಳೀಯ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಕಾರ್ಯಾಚರಣೆ ನಡೆಸಬಾರದು ಎಂದು ಒತ್ತಾಯಿಸಿದರು.
ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬದಲು ಅವುಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸುವ ಕ್ರಮ ಸರಿಯಲ್ಲ ಎಂಬುದು ಪ್ರತಿಭಟನಾಕಾರರ ಪ್ರಮುಖ ಆಕ್ಷೇಪವಾಗಿದೆ.
ಮೂಡಿಗೆರೆ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜನಜೀವನ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- ತತ್ಕೋಳ ಅರಣ್ಯದತ್ತ ತೆರಳದೆ ವಾಪಸ್ ಬೇಲೂರಿನತ್ತ ಮುಖ ಮಾಡಿದ 22 ಕಾಡಾನೆಗಳುಆಪರೇಷನ್ ಗಜಕ್ಕೆ ಕಾಡಾನೆಗಳ ತಿರುಗೇಟು; ತತ್ಕೋಳ ಅರಣ್ಯಕ್ಕೆ ತೆರಳದೆ ಬೇಲೂರು ಕಡೆಗೆ ಹಿಂಡು… Read more: ತತ್ಕೋಳ ಅರಣ್ಯದತ್ತ ತೆರಳದೆ ವಾಪಸ್ ಬೇಲೂರಿನತ್ತ ಮುಖ ಮಾಡಿದ 22 ಕಾಡಾನೆಗಳು
- ಮೂಡಿಗೆರೆಯಲ್ಲಿ ಕಾಡಾನೆ ಸ್ಥಳಾಂತರಕ್ಕೆ ತೀವ್ರ ವಿರೋಧ; ವಿವಿಧ ಸಂಘಟನೆಗಳಿಂದ ಪಟ್ಟಣ ಬಂದ್ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ; ಮೂಡಿಗೆರೆಯಲ್ಲಿ ಹೋರಾಟಗಾರರ ಆಕ್ರೋಶ ಚಿಕ್ಕಮಗಳೂರು: ಕಾಡಾನೆಗಳನ್ನು… Read more: ಮೂಡಿಗೆರೆಯಲ್ಲಿ ಕಾಡಾನೆ ಸ್ಥಳಾಂತರಕ್ಕೆ ತೀವ್ರ ವಿರೋಧ; ವಿವಿಧ ಸಂಘಟನೆಗಳಿಂದ ಪಟ್ಟಣ ಬಂದ್
- ಕರ್ನಾಟಕದಲ್ಲಿ ಹೂಡಿಕೆ ವಿಸ್ತರಣೆಗೆ ಸುಮಿಟೊಮೊ ಆಸಕ್ತಿ; ₹2,000 ಕೋಟಿಗೂ ಅಧಿಕ ಉಕ್ಕು ಯೋಜನೆಗೆ ವೇಗಕೊಪ್ಪಳದ ಉಕ್ಕು ಘಟಕ, ಬೆಂಗಳೂರಿನ ಜಪಾನಿ ಕೈಗಾರಿಕಾ ಪಾರ್ಕ್: ಸುಮಿಟೊಮೊ ಯೋಜನೆಗಳಿಗೆ ಸರ್ಕಾರದ… Read more: ಕರ್ನಾಟಕದಲ್ಲಿ ಹೂಡಿಕೆ ವಿಸ್ತರಣೆಗೆ ಸುಮಿಟೊಮೊ ಆಸಕ್ತಿ; ₹2,000 ಕೋಟಿಗೂ ಅಧಿಕ ಉಕ್ಕು ಯೋಜನೆಗೆ ವೇಗ
- ವಿನಯ್ ಕುಲಕರ್ಣಿ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ರದ್ದು, 2 ವಾರಗಳಲ್ಲಿ… Read more: ವಿನಯ್ ಕುಲಕರ್ಣಿ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್
- ಕನ್ನಡಿಗರೊಂದಿಗೆ ಜಪಾನ್ನಲ್ಲಿ ಆತ್ಮೀಯವಾಗಿ ಬೆರೆತ ಸಿಎಂ ಡಿ.ಕೆ.ಶಿಜಪಾನ್ ಕನ್ನಡ ಸಂಘ, ಟೋಕಿಯೋ ಕನ್ನಡ ಬಳಗದ ಸದಸ್ಯರೊಂದಿಗೆ ಮಾತುಕತೆ ಜಪಾನ್ ಪ್ರವಾಸದಲ್ಲಿರುವ… Read more: ಕನ್ನಡಿಗರೊಂದಿಗೆ ಜಪಾನ್ನಲ್ಲಿ ಆತ್ಮೀಯವಾಗಿ ಬೆರೆತ ಸಿಎಂ ಡಿ.ಕೆ.ಶಿ
- IIM ಬೆಂಗಳೂರು ಮತ್ತೆ ನಂ.1: ಎಡ್ಯುನಿವರ್ಸಲ್ 2027 ರ್ಯಾಂಕಿಂಗ್ನಲ್ಲಿ ಭಾರತ–ಮಧ್ಯ ಏಷ್ಯಾದ ಅಗ್ರಸ್ಥಾನIIM ಬೆಂಗಳೂರಿಗೆ ಗೋಲ್ಡ್ ಟ್ರೋಫಿ: ಎಡ್ಯುನಿವರ್ಸಲ್ ರ್ಯಾಂಕಿಂಗ್ನಲ್ಲಿ ಮತ್ತೊಮ್ಮೆ ಮುಂಚೂಣಿ ಬೆಂಗಳೂರು :… Read more: IIM ಬೆಂಗಳೂರು ಮತ್ತೆ ನಂ.1: ಎಡ್ಯುನಿವರ್ಸಲ್ 2027 ರ್ಯಾಂಕಿಂಗ್ನಲ್ಲಿ ಭಾರತ–ಮಧ್ಯ ಏಷ್ಯಾದ ಅಗ್ರಸ್ಥಾನ



























