ಐಪಿಎಲ್ 2027ರ ಆರಂಭಕ್ಕೂ ಮುನ್ನವೇ ಆರ್ ಸಿಬಿ ತಂಡಕ್ಕೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಆಸ್ಟ್ರೇಲಿಯಾದ ಸ್ಟಾರ್ ವೇಗಿ ಜೋಶ್ ಹೇಝಲ್ವುಡ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆಡಲು ಸಂಪೂರ್ಣ ಲಭ್ಯವಿರುವುದಾಗಿ ಫ್ರಾಂಚೈಸಿಗೆ ತಿಳಿಸಿದ್ದಾರೆ. ಇದರಿಂದ ಆರ್ಸಿಬಿ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.
2027ರಲ್ಲಿ ಆಸ್ಟ್ರೇಲಿಯಾ ತಂಡದ ಅಂತಾರಾಷ್ಟ್ರೀಯ ವೇಳಾಪಟ್ಟಿ ಸಾಕಷ್ಟು ಬಿಡುವಿಲ್ಲದಾಗಿದೆ. ಜನವರಿಯಿಂದ ಮಾರ್ಚ್ವರೆಗೆ ಭಾರತ ವಿರುದ್ಧ ಸರಣಿ, ಬಳಿಕ ಇಂಗ್ಲೆಂಡ್ನಲ್ಲಿ ಆ್ಯಶಸ್ ಸರಣಿ ಹಾಗೂ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಕೆಲವು ಪ್ರಮುಖ ಆಟಗಾರರು ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಪ್ಯಾಟ್ ಕಮಿನ್ಸ್ ಲಭ್ಯತೆಯೂ ಅನುಮಾನದಲ್ಲಿದೆ. ಆದರೆ ಹೇಝಲ್ವುಡ್ ಮಾತ್ರ ಆರ್ಸಿಬಿಗೆ ಜೈ ಎಂದಿದ್ದಾರೆ.
ಆರ್ಸಿಬಿ ತಂಡವು ಹೇಝಲ್ವುಡ್ ಅವರನ್ನು ₹12.50 ಕೋಟಿ ನೀಡಿ ಉಳಿಸಿಕೊಂಡಿದೆ. ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಅವರು ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ನೀಡಲಿದ್ದಾರೆ.
ಈಗಾಗಲೇ ತಂಡದಲ್ಲಿ ಭುವನೇಶ್ವರ್ ಕುಮಾರ್, ಯಶ್ ದಯಾಳ್, ನುವಾನ್ ತುಷಾರ, ಜೇಕಬ್ ಡಫಿ ಮತ್ತು ರಾಸಿಖ್ ದಾರ್ ಅವರಂತಹ ವೇಗದ ಬೌಲರ್ಗಳಿದ್ದಾರೆ. ಇವರೊಂದಿಗೆ ಹೇಝಲ್ವುಡ್ ಕೂಡ ಕಣಕ್ಕಿಳಿದರೆ ಆರ್ಸಿಬಿ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠವಾಗಲಿದೆ.
ಇನ್ನು ಮಿನಿ ಹರಾಜಿಗೂ ಮುನ್ನ ಆರ್ಸಿಬಿ ಬಳಿ ₹14.15 ಕೋಟಿ ಮೊತ್ತದ ಪರ್ಸ್ ಇದೆ. ತಂಡದಲ್ಲಿ ಐದು ಸ್ಥಾನಗಳು ಖಾಲಿಯಿದ್ದು, ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಆಸ್ಟ್ರೇಲಿಯಾ ತಂಡದ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿ ಆಟಗಾರರ ಲಭ್ಯತೆಯ ಬಗ್ಗೆ ಆತಂಕ ಮೂಡಿಸಿದೆ. ಜನವರಿಯಿಂದ ಮಾರ್ಚ್ವರೆಗೆ ಭಾರತ ವಿರುದ್ಧ ಟೆಸ್ಟ್ ಸರಣಿ, ಬಳಿಕ ಇಂಗ್ಲೆಂಡ್ನಲ್ಲಿ ಆಯಷಸ್ ಸರಣಿ ಹಾಗೂ 2027ರ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ಪೂರ್ಣ ಐಪಿಎಲ್ ಆಡಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.
ಒಟ್ಟಿನಲ್ಲಿ, 2027ರ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಗುರಿ ಹೊಂದಿರುವ ಆರ್ಸಿಬಿಗೆ ಹೇಝಲ್ವುಡ್ ಲಭ್ಯತೆ ದೊಡ್ಡ ಬಲವಾಗಲಿದೆ.





















