SK Home Ad
Home ಸುದ್ದಿ ಚಿನ್ನಾಭರಣ ಪ್ರಿಯರಿಗೆ ಸ್ವಲ್ಪ ಸಿಹಿ ಜಾಸ್ತಿ ಕಹಿ‌ಯ ಸುದ್ದಿ: 15 ದಿನದಿಂದ ಗೋಲ್ಡ್ ರೇಟ್ ಭಾರೀ...

ಚಿನ್ನಾಭರಣ ಪ್ರಿಯರಿಗೆ ಸ್ವಲ್ಪ ಸಿಹಿ ಜಾಸ್ತಿ ಕಹಿ‌ಯ ಸುದ್ದಿ: 15 ದಿನದಿಂದ ಗೋಲ್ಡ್ ರೇಟ್ ಭಾರೀ ಇಳಿಕೆ!

0
29

ಬೆಂಗಳೂರು: ಚಿನ್ನ ಹೆಣ್ಣು ಮಕ್ಕಳಿಗೆ ಸೌಂದರ್ಯದ ಸಂಕೇತ. ಆಭರಣಗಳಲ್ಲಿ ಬಹಳ ಪ್ರಿಯವಾದದ್ದು. ಬಂಗಾರವನ್ನ ದಿನನಿತ್ಯ ಬಳಸದೇ ಮನೆಯಲ್ಲಿ ಇಟ್ಟರು ಪರವಾಗಿಲ್ಲ. ಆದರೆ ಚಿನ್ನ ಮಾತ್ರ ಖರೀದಿಸಬೇಕು ಎನ್ನುವ ಆಸೆ ಹೆಣ್ಣು ಮಕ್ಕಳಲ್ಲಿದೆ.

ಕಳೆದ ಎರಡು ಮೂರು ವರ್ಷದಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದೆ. ಆದರೆ ಕಳೆದ 15 ದಿನಗಳಲ್ಲಿ ಗೋಲ್ಡ್ ರೇಟ್ ದಾಖಲೆ ಮಟ್ಟದಲ್ಲಿ ಇಳಿಕೆ ಕಂಡಿದೆ. ಇದು ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಸಂತಸ ತಂದಿದೆ.

ಬೆಂಗಳೂರು ಮಾತ್ರವಲ್ಲದೆ ದೇಶದ ಹಲವು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸಾರ್ವಕಾಲಿಕವಾಗಿ ಇಳಿಕೆ ಕಂಡಿದೆ. ಇಂದು ಮಾರುಕಟ್ಟೆಯಲ್ಲಿ ಚಿನ್ನ 24 ಕ್ಯಾರೆಟ್ ಚಿನ್ನ ಒಂದು ಗ್ರಾಂ. 13,326 ರೂಪಾಯಿ, 22 ಕ್ಯಾರೆಟ್ ಚಿನ್ನ ಗ್ರಾಂ. 12,215 ರೂ. ಮತ್ತು 18 ಕ್ಯಾರೆಟ್ ಚಿನ್ನ 9,994 ರೂ. ಇಳಿಕೆ ಕಂಡಿದೆ.

ಕಳೆದ ನವೆಂಬರ್ 10 ರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ದಾಖಲಾಗುತ್ತಲೇ ಬಂದಿದೆ. ಪ್ರತಿನಿತ್ಯ ಚಿನ್ನದ ಬೆಲೆಯಲ್ಲಿ ಇಳಿಕೆ ದಾಖಲಾಗುತ್ತಿದ್ದು, ಪ್ರತಿ ಗ್ರಾಂ ಚಿನ್ನದ ಬೆಲೆ 12 ಸಾವಿರ ರೂಪಾಯಿ ಆಸುಪಾಸಿನಲ್ಲಿದೆ. ಅದೇ ರೀತಿಯಲ್ಲಿ ಬೆಳ್ಳಿ ಪ್ರತಿ ಗ್ರಾಂ ಗೆ 185 ರೂ. ಇಳಿಕೆಯಾಗಿದೆ.

ಇವತ್ತಿನ ಬಂಗಾರದ ಬೆಲೆ ಆಧಾರದ ಮೇಲೆ ಮುಂದೆ ಚಿನ್ನ ಮತ್ತು ಬೆಳ್ಳಿ ಬೆಲೆ ಇದೇ ರೀತಿ ಗಣನೀಯವಾಗಿ ಇಳಿಕೆ ಆದರೆ ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಬಹುದು.