SK Home Ad
Home ಸುದ್ದಿ ರಾಜ್ಯ ರೈತರಿಗಾಗಿ 6 ತಿಂಗಳ ಸಂಬಳವನ್ನೇ ಬಿಟ್ಟುಕೊಟ್ಟ ಶಾಸಕ ಯತ್ನಾಳ್

ರೈತರಿಗಾಗಿ 6 ತಿಂಗಳ ಸಂಬಳವನ್ನೇ ಬಿಟ್ಟುಕೊಟ್ಟ ಶಾಸಕ ಯತ್ನಾಳ್

0
74

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ 6 ತಿಂಗಳ ವೇತನ 4.83 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಬರ ಪರಿಹಾರ ಶಾಖೆಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಭುವನೇಶ್ವರಯ್ಯ ಅವರ ಮೂಲಕ ಶಾಸಕರು ಚೆಕ್ ಹಸ್ತಾಂತರಿಸಿದರು. ರಾಜ್ಯದಲ್ಲಿ ಮಳೆಯ ಅಭಾವದಿಂದ ತೀವ್ರ ಬರಗಾಲವನ್ನು ಎದುರಿಸುತ್ತಿದ್ದು, ಇದರಿಂದಾಗಿ ಅನ್ನದಾತರು ಬೆಳೆ ಬೆಳೆಯಲು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯ ಕುರಿತು ಚರ್ಚಿಸಲು ಸೆಪ್ಟೆಂಬರ್ ತಿಂಗಳಲ್ಲಿ ಕರೆಯಲಾದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ರೈತರ ಪ್ರತಿ ಕುಟುಂಬಕ್ಕೆ ಕೇವಲ 2,500 ರೂ. ಘೋಷಿಸಿದ್ದರು. ಆಗ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹೆಚ್ಚಿನ ಪರಿಹಾರ ಘೋಷಣೆಗೆ ಸರ್ಕಾರಕ್ಕೆ ಆಗ್ರಹಿಸಿದ್ದರು.

ಅಲ್ಲದೆ, ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಪರಿಹಾರ ಮೊತ್ತ ಘೋಷಿಸಬೇಕೆಂದು ಆಗ್ರಹಿಸಿ ಸಾವಿರಾರು ಸಂಖ್ಯೆಯ ರೈತರೊಂದಿಗೆ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಬರ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆರ್ಥಿಕ ತೊಂದರೆ ಆಗುತ್ತಿದ್ದರೆ, ಅವರ ನೆರವಿಗಾಗಿ ತಮ್ಮ 6 ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ (ಬರಗಾಲ)ಗೆ ನೀಡುವುದಾಗಿ ಆಗಲೇ ಘೋಷಿಸಿದ್ದರು.