SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್‌ನಲ್ಲಿ ತಾರಕ್ಕೇರಿದ ಗಲಾಟೆ: ಆಸಿಯಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಗಾನವಿ!

ಬಿಗ್‌ ಬಾಸ್‌ನಲ್ಲಿ ತಾರಕ್ಕೇರಿದ ಗಲಾಟೆ: ಆಸಿಯಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಗಾನವಿ!

0
20

BBK13: ‘ಬಿಗ್‌ ಬಾಸ್‌ ಕನ್ನಡ ಸೀಸನ್-೧೩’ ರಿಯಾಲಿಟಿ ಶೋನಲ್ಲಿ ಮಹಿಳಾ ಸ್ಪರ್ಧಿಗಳ ನಡುವಿನ ಜಗಳ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಅದರಲ್ಲೂ ಗಾನವಿ ಗೌಡ ಮತ್ತು ಆಸಿಯಾ ಫಿರ್ದೋಸ್ ನಡುವಿನ ವಾಗ್ವಾದ ಸದ್ಯ ತಾರಕ್ಕೇರಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಆಸಿಯಾ ಅವರು ಪದೇ ಪದೇ ತಮ್ಮ ಸಫಾಯಿ ನೀಡುತ್ತಿದ್ದರೂ, ಗಾನವಿ ಅವರು ಕೇವಲ ಆಸಿಯಾ ಅವರನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬ ಮಾತುಗಳು ಮನೆಯಲ್ಲಿ ಕೇಳಿಬರುತ್ತಿವೆ.

ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ ವಾರದ ನಾಮಿನೇಷನ್ ಚಟುವಟಿಕೆ ನಡೆಯುತ್ತಿದ್ದು, ಸ್ಪರ್ಧಿಗಳು ಅರ್ಹತೆ ಇಲ್ಲದವರ ಫೋಟೋಗೆ ಕೊಡಲಿ ಚುಚ್ಚಿ ನಾಮಿನೇಟ್ ಮಾಡಬೇಕಿತ್ತು. ಈ ಟಾಸ್ಕ್‌ನಲ್ಲಿ ಗಾನವಿ ಅವರು ಮತ್ತೆ ಆಸಿಯಾ ಅವರನ್ನೇ ಗುರಿಯಾಗಿಸಿ, ಮನೆಯಲ್ಲಿ ಅವರ ಆಟ ಹಾಗೂ ಕಾಂಟ್ರಿಬ್ಯೂಷನ್ ಕಡಿಮೆಯಿದೆ ಎಂದು ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ. ಇದರಿಂದ ಕೆರಳಿದ ಆಸಿಯಾ, “ನಾನು ಆಡಿರುವಷ್ಟು ಟಾಸ್ಕ್‌ಗಳನ್ನು ನೀನು ಆಡಿಯೇ ಇಲ್ಲ, ಸೈಡ್‌ಗೆ ಹೋಗು” ಎಂದು ನೇರ ಸವಾಲು ಹಾಕಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಗಾನವಿ, “ಹೊರಗಡೆ ಬಂದು ಕೇಳು ಗಾನವಿ ಯಾರು ಅಂತ” ಎಂದಾಗ, “ನನಗಂತೂ ನೀನು ಯಾರು ಅಂತ ಗೊತ್ತಿಲ್ಲ” ಎಂದು ಆಸಿಯಾ ತಿರುಗೇಟು ನೀಡಿದರು. ಈ ವೇಳೆ ಗಾನವಿ, “ನಿನ್ನ ಒಂದೊಂದೇ ವಿಚಾರ ಬಿಚ್ಚಿಡಲೇ?” ಎಂದು ಹೊಸ ಬಾಂಬ್ ಸಿಡಿಸಿದಾಗ, “ಧಮ್ ಇದ್ದರೆ ಬಿಚ್ಚಿಡು ನೋಡೋಣ” ಎಂದು ಆಸಿಯಾ ಆಕ್ರೋಶ ಹೊರಹಾಕಿದರು. ವೈಯಕ್ತಿಕ ವಿಚಾರಗಳ ಬಗ್ಗೆ ಆಸಕ್ತಿಯಿಲ್ಲ ಎಂದು ಗಾನವಿ ಜಾರಿಕೊಂಡರೂ, ಇಬ್ಬರ ನಡುವಿನ ಈ ಜೋರು ಗಲಾಟೆ ಮುಂದಿನ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಪ್ರಮುಖ ಚರ್ಚಾವಿಷಯವಾಗುವುದು ಖಚಿತವಾಗಿದೆ.