SK Home Ad
Home ಸುದ್ದಿ ರಾಜ್ಯ ಮೈಸೂರಿನಲ್ಲಿ ನವ ದಂಪತಿಗೆ ಹಾಲು, ಮೊಸರು ಉಡುಗೊರೆ!

ಮೈಸೂರಿನಲ್ಲಿ ನವ ದಂಪತಿಗೆ ಹಾಲು, ಮೊಸರು ಉಡುಗೊರೆ!

0
30

ಮೈಸೂರು: ಹಾಲು, ಮೊಸರು ಬೆಲೆಯಲ್ಲಿ ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರಜ್ಞಾವಂತ ನಾಗರಿಕ ವೇದಿಕೆ ನವ ದಂಪತಿಗೆ ಹಾಲು, ಮೊಸರನ್ನೇ ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದಿದೆ.

ಹೌದ, ಅಚ್ಚರಿ ಅನ್ನಿಸಿದರೂ ಸತ್ಯ. ಮೈಸೂರಿನ ಕಡಕೋಳದ ಕಾಳಿಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಜು-ಅನನ್ಯ ವಿವಾಹ ನಡೆದಿದ್ದು, ಈ ವೇಳೆ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್ ಹಾಲು ಹಾಗೂ ಮೊಸರಿನ ಪಾಕೆಟ್ ಉಡುಗೊರೆಯಾಗಿ ನೀಡಿ ವಿಭಿನ್ನ ಜಾಗೃತಿ ಮೂಡಿಸಿದರು.

ಹಾಲು, ಮೊಸರು ಪ್ರತಿಯೊಂದು ಕುಟುಂಬದ ನಿತ್ಯದ ಅಗತ್ಯ ವಸ್ತು. ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಹೊರೆಯಾಗಿದೆ.

ಜನಸಾಮಾನ್ಯರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜನರಿಗೆ ಹೊರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಈ ವೇಳೆ ಬಿಜೆಪಿ ಮುಖಂಡ ಜೋಗಿ ಮಂಜು ಇದ್ದರು.