SK Home Ad
Home ಕ್ರೀಡೆ ಮೆಸ್ಸಿಗೆ ಬಿಗ್ ಶಾಕ್: ಸಾರ್ವಕಾಲಿಕ ಶ್ರೇಷ್ಠ ‘ಬ್ಯಾಲನ್ ಡಿ’ಓರ್’ ಪ್ರಶಸ್ತಿ ಮುಡಿಗೇರಿಸಿಕೊಂಡ ಕ್ರಿಸ್ಟಿಯಾನೊ ರೊನಾಲ್ಡೊ!

ಮೆಸ್ಸಿಗೆ ಬಿಗ್ ಶಾಕ್: ಸಾರ್ವಕಾಲಿಕ ಶ್ರೇಷ್ಠ ‘ಬ್ಯಾಲನ್ ಡಿ’ಓರ್’ ಪ್ರಶಸ್ತಿ ಮುಡಿಗೇರಿಸಿಕೊಂಡ ಕ್ರಿಸ್ಟಿಯಾನೊ ರೊನಾಲ್ಡೊ!

0
16

ಫುಟ್‌ಬಾಲ್ ಇತಿಹಾಸದಲ್ಲೇ ಅತಿ ಹೆಚ್ಚು ಬ್ಯಾಲನ್ ಡಿ’ಓರ್ ಪ್ರಶಸ್ತಿಗಳನ್ನು ಗೆದ್ದಿರುವ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ, ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ‘ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿ’ಓರ್’ (Ballon d’Or of All Time – B.O.A.T.) ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬ್ಯಾಲನ್ ಡಿ’ಓರ್ ಪ್ರಶಸ್ತಿಯ 70ನೇ ವಾರ್ಷಿಕೋತ್ಸವದ ಅಂಗವಾಗಿ ಜಗತ್ತಿನಾದ್ಯಂತ ಅಭಿಮಾನಿಗಳ ನಡುವೆ ನಡೆಸಲಾದ ವಿಶೇಷ ಮತದಾನದಲ್ಲಿ ರೊನಾಲ್ಡೊ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಕನಿಷ್ಠ ಎರಡು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದ ಆಟಗಾರರ ನಡುವೆ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. 2012ರ ಋತುವಿನಲ್ಲಿ ಬಾರ್ಸಿಲೋನಾ ಪರ ಲಿಯೋನೆಲ್ ಮೆಸ್ಸಿ ಬರೋಬ್ಬರಿ 91 ಗೋಲು ಬಾರಿಸಿ ನಿರ್ಮಿಸಿದ್ದ ಸಾರ್ವಕಾಲಿಕ ದಾಖಲೆಯ ಋತುವಿಗಿಂತಲೂ, 2007-08ರ ಋತುವಿನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ ರೊನಾಲ್ಡೊ ನೀಡಿದ್ದ ಮಾಂತ್ರಿಕ ಪ್ರದರ್ಶನವೇ ಶ್ರೇಷ್ಠವೆಂದು ಅಭಿಮಾನಿಗಳು ತೀರ್ಪು ನೀಡಿದ್ದಾರೆ.

2007-08ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಪ್ರೀಮಿಯರ್ ಲೀಗ್ ಹಾಗೂ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಎರಡನ್ನೂ ಗೆಲ್ಲುವಲ್ಲಿ ರೊನಾಲ್ಡೊ ಪ್ರಮುಖ ಪಾತ್ರ ವಹಿಸಿದ್ದರು. ಆ ಋತುವಿನಲ್ಲಿ 42 ಗೋಲು ಮತ್ತು 8 ಅಸಿಸ್ಟ್‌ಗಳನ್ನು ನೀಡಿದ್ದ ರೊನಾಲ್ಡೊ, ಪ್ರೀಮಿಯರ್ ಲೀಗ್ ಗೋಲ್ಡನ್ ಬೂಟ್, ಚಾಂಪಿಯನ್ಸ್ ಲೀಗ್ ಟಾಪ್ ಸ್ಕೋರರ್, ಯುರೋಪಿಯನ್ ಗೋಲ್ಡನ್ ಶೂ, ಪಿಎಫ್‌ಎ ವರ್ಷದ ಆಟಗಾರ ಹಾಗೂ ಫಿಫಾ ವರ್ಷದ ಆಟಗಾರ ಸೇರಿದಂತೆ ಪ್ರತಿಯೊಂದು ವೈಯಕ್ತಿಕ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು.

ಅಂತಿಮ ಶ್ರೇಯಾಂಕದ ಟಾಪ್ 10 ಸ್ಥಾನಗಳನ್ನು ಈ ಇಬ್ಬರೇ ಹಂಚಿಕೊಂಡಿದ್ದು, ರೊನಾಲ್ಡೊ ಅವರ 2008, 2017, 2016, 2014 ಮತ್ತು 2013ರ ಋತುಗಳು ಹಾಗೂ ಮೆಸ್ಸಿಯವರ 2012, 2023, 2015, 2011 ಮತ್ತು 2009ರ ಐತಿಹಾಸಿಕ ಋತುಗಳು ಸ್ಥಾನ ಪಡೆದುಕೊಂಡಿವೆ.