SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗದ ಸಾಹಿತಿ ತಿಪ್ಪಣ್ಣ ಮರಿಕುಂಟೆಗೆ ರಾಜ್ಯದ ಪ್ರತಿಷ್ಠಿತ ಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಚಿತ್ರದುರ್ಗದ ಸಾಹಿತಿ ತಿಪ್ಪಣ್ಣ ಮರಿಕುಂಟೆಗೆ ರಾಜ್ಯದ ಪ್ರತಿಷ್ಠಿತ ಮಹರ್ಷಿ ವಾಲ್ಮೀಕಿ ಪ್ರಶಸ್ತಿ

0
85
ಕುರಿಗಾಹಿ ಸಮುದಾಯದ ಬದುಕಿಗೆ ಸಾಹಿತ್ಯದ ಸ್ಪರ್ಶ: ತಿಪ್ಪಣ್ಣ ಮರಿಕುಂಟೆಗೆ ವಾಲ್ಮೀಕಿ ಪ್ರಶಸ್ತಿ

ಸಾಹಿತ್ಯದ ಮೂಲಕ ಹಾಲುಮತದ ಪರಂಪರೆ ಪರಿಚಯಿಸಿದ ತಿಪ್ಪಣ್ಣ ಮರಿಕುಂಟೆಗೆ ವಾಲ್ಮೀಕಿ ಪ್ರಶಸ್ತಿ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಹೆಮ್ಮೆಯ ಸಾಹಿತಿ ತಿಪ್ಪಣ್ಣ ಮರಿಕುಂಟೆ ಅವರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಲಭಿಸಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಪ್ರತಿವರ್ಷ ವಾಲ್ಮೀಕಿ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಈ ಬಾರಿ ಸಾಹಿತ್ಯ ಕ್ಷೇತ್ರದಲ್ಲಿ ತಿಪ್ಪಣ್ಣ ಮರಿಕುಂಟೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕುರಿ-ಕಾಯುವ ಸಮುದಾಯದ ಜೀವನ, ಸಂಸ್ಕೃತಿ, ಜಾನಪದ ಮತ್ತು ಹಾಲುಮತದ ಪರಂಪರೆಯನ್ನು ತಮ್ಮ ಬರಹಗಳ ಮೂಲಕ ರಾಜ್ಯಮಟ್ಟಕ್ಕೆ ಪರಿಚಯಿಸಿದ ಹಿರಿಮೆ ತಿಪ್ಪಣ್ಣ ಅವರದ್ದು. ಬರಗಾಲದ ಬದುಕು, ಗ್ರಾಮೀಣ ಸೊಗಡು ಮತ್ತು ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಅವರು ನಿರಂತರವಾಗಿ ಸಾಹಿತ್ಯ ಕೃಷಿ ಮಾಡುತ್ತಾ ಬಂದಿದ್ದಾರೆ. ಅವರ ಈ ಸಾಧನೆಯನ್ನು ಪರಿಗಣಿಸಿ ಇಲಾಖೆಯು ಈ ಪ್ರಶಸ್ತಿಯನ್ನು ಘೋಷಿಸಿದೆ.

ಈ ಪ್ರಶಸ್ತಿಯು ನಗದು ಮೊತ್ತ, ಚಿನ್ನದ ಪದಕ ಮತ್ತು ಸನ್ಮಾನ ಪತ್ರವನ್ನು ಒಳಗೊಂಡಿದೆ. ಮುಂಬರುವ ವಾಲ್ಮೀಕಿ ಜಯಂತಿಯಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಕುಗ್ರಾಮದ ಸಾಹಿತಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಸಾಹಿತ್ಯ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.