ಹುಬ್ಬಳ್ಳಿ : ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ಹುಬ್ಬಳ್ಳಿಯಿಂದ ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿಗೆ ಒನ್-ವೇ ವಿಶೇಷ ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ *ಡಾ. ಮಂಜುನಾಥ ಕಣಮಡಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ-ಝಾನ್ಸಿ ಒನ್-ವೇ ಎಕ್ಸ್ಪ್ರೆಸ್ ವಿಶೇಷ ರೈಲು (07349) ಅಕ್ಟೋಬರ್ 22 ರ ಗುರುವಾರ ರಾತ್ರಿ 11:50ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದ್ದು, ಮೂರನೇ ದಿನ ಬೆಳಗ್ಗೆ 6:30ಕ್ಕೆ ಝಾನ್ಸಿ ತಲುಪಲಿದೆ.
ಈ ರೈಲು ಗದಗ, ಬಾದಾಮಿ, ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ, ದೌಂಡ್, ಕೊಪರಗಾಂವ್, ಮನ್ಮಾಡ್, ಭುಸಾವಳ್, ಖಾಂಡ್ವಾ, ಇಟಾರ್ಸಿ, ರಾಣಿ ಕಮಲಾಪತಿ ಮತ್ತು ಬೀನಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ. ಒಟ್ಟು 20 ಬೋಗಿಗಳಿದ್ದು, 10 ಸ್ಲೀಪರ್, 8 ಸಾಮಾನ್ಯ ಮತ್ತು 2 ದಿವ್ಯಾಂಗ ಸ್ನೇಹಿ ಬೋಗಿಗಳಿರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.






















