ಚಿತ್ರದುರ್ಗ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ “ಆನೆಗಳು ಹೋಗುತ್ತವೆ, ಶ್ವಾನ ಬೊಗಳುತ್ತವೆ” ಎಂಬ ಹೇಳಿಕೆಗೆ ಹಿರಿಯೂರು ಪಟ್ಟಣದಲ್ಲಿ ಸಚಿವ ಬಾಲಕೃಷ್ಣ ಖಡಕ್ ತಿರುಗೇಟು ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಆನೆ ಇದ್ದಂತೆ, ಬಾಕಿಯವರು ನಾಯಿ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಹಾಗೇ ಹೇಳಿದರೆ ನಮ್ಮದೂ ಅದೇ ರೀತಿ ಉತ್ತರ ಇರುತ್ತದೆ ಎಂದು ಬಾಲಕೃಷ್ಣ ಕಿಡಿಕಾರಿದರು.
ಡಿ.ಕೆ. ಶಿವಕುಮಾರ ಆನೆಯಂತೆ ಹೋಗುತ್ತಾರೆ, ಬಾಕಿಯವರು ನಾಯಿಯಂತೆ ಬೊಗಳುತ್ತಾರೆ ಎಂದು ಹೆಚ್.ಡಿ.ಕೆ ಆ ಪದ ಬಳಸಿದ್ದಕ್ಕೆ ನಾನು ಹೇಳುತ್ತಿದ್ದೇನೆ. ಇಲ್ಲದಿದ್ದರೆ ನಾನು ಹೀಗೆ ಹೇಳುತ್ತಿರಲಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.





















