SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ನಾಟಕ ಪ್ರದರ್ಶವ ವೇಳೆಕುಸಿದು ಬಿದ್ದ ಕಲಾವಿದ ಸಾವು

ನಾಟಕ ಪ್ರದರ್ಶವ ವೇಳೆಕುಸಿದು ಬಿದ್ದ ಕಲಾವಿದ ಸಾವು

0
48

ಚಿತ್ರದುರ್ಗ: ನಾಟಕ ಪ್ರದರ್ಶನದ ವೇಳೆಯೇ ಕುಸಿದು ಬಿದ್ದು ಕಲಾವಿದರೊಬ್ಬರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಚಳ್ಳಕೆರೆ ತಾಲೂಕಿನ ಬೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಕ್ಟೋಬರ್ 14ರಂದು ಬೋಗನಹಳ್ಳಿಯಲ್ಲಿ ‘ಹೃದಯ ಜಾರಿತು ಪ್ರೀತಿ ಉಳಿಯಿತು’ ನಾಟಕ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ನಾಟಕದಲ್ಲಿ ಅಭಿನಯಿಸುತ್ತಿದ್ದ ಸ್ಥಳೀಯ ಕಲಾವಿದ ಶಿವಣ್ಣ (45) ಅವರು ಏಕಾಏಕಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ, ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.