SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್‌ ಕನ್ನಡ ಸೀಸನ್‌ 13: ಧನುಷ್‌ ಹೊಸ ಕ್ಯಾಪ್ಟನ್‌, ಮಂಜನ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 13: ಧನುಷ್‌ ಹೊಸ ಕ್ಯಾಪ್ಟನ್‌, ಮಂಜನ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು!

0
18

Bengalore: ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ ಕಾವೇರಿದ್ದು, ತೀವ್ರ ಪೈಪೋಟಿಯ ಬಳಿಕ ಧನುಷ್‌ ಮಂಜುನಾಥ್‌ ಮನೆಯ ಮೂರನೇ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ, ಕಾಲು ಪೆಟ್ಟಾಗಿದ್ದರೂ ಕುಂಟುತ್ತಲೇ ಧನುಷ್‌ ಟಾಸ್ಕ್‌ ಆಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಫೈನಲ್‌ನಲ್ಲಿ ಸೋನಿಕಾ ಅವರನ್ನು ಮಣಿಸಿ ವಿಜಯಶಾಲಿಯಾದರು. ಈ ಬಾರಿ ಜಗದೀಶ್‌ (ಜಗ್ಗಮಮ್ಮಿ) ಕ್ಯಾಪ್ಟನ್ಸಿ ಟಾಸ್ಕ್‌ನ ಉಸ್ತುವಾರಿಯಾಗಿ ಜವಾಬ್ದಾರಿ ನಿರ್ವಹಿಸಿದರು.

7 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದ ಈ ಟಾಸ್ಕ್‌ನಲ್ಲಿ ರೋಚಕ ಸುತ್ತುಗಳು ನಡೆದವು. ಧನುಷ್‌, ಯಶಸ್‌ ಕೃಷ್ಣ ಹಾಗೂ ಕಾವ್ಯ ಅವರನ್ನು ಹೊರಹಾಕಿದರೆ, ಗಾನವಿ ,ಆಸಿಯಾ ಅವರನ್ನು ಹಾಗೂ ತಾಂಡವ್‌ ರಾಮ್‌ ಅವರು ಗಾನವಿ ಅವರನ್ನು ಟಾಸ್ಕ್‌ನಿಂದ ಆಚೆಗಿಟ್ಟರು. ಅಂತಿಮವಾಗಿ ಸೋನಿಕಾ ಮತ್ತು ಧನುಷ್‌ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಧನುಷ್‌ ಜಯ ಸಾಧಿಸಿದರು.

ಇದೇ ವೇಳೆ, ‘ರಾಕ್ಷಸರು ಮತ್ತು ಗಂಧರ್ವರು’ ಟಾಸ್ಕ್‌ನಲ್ಲಿ ಮಾಡ್ರನ್‌ ಮಹಾಕವಿ ಮಂಜ ಆಡಿದ ಕೀಳು ಮಟ್ಟದ ಮಾತುಗಳು ಹಾಗೂ ಟಾಸ್ಕ್‌ನ ವಸ್ತುಗಳನ್ನು ಹಾಳುಗೆಡವಿದ ವರ್ತನೆ ಭಾರಿ ವಿವಾದ ಸೃಷ್ಟಿಸಿತು. ಮಂಜನ ಈ ಅಸಭ್ಯ ನಡೆಗೆ ಬೆಸ್ತು ಬಿದ್ದ ಮನೆಯ ಸ್ಪರ್ಧಿಗಳು ರೊಚ್ಚಿಗೆದ್ದರು. ಇದರ ಪರಿಣಾಮವಾಗಿ 5ನೇ ವಾರದ ಕಳಪೆ ಪಟ್ಟ ಪಡೆದ ಮಂಜ, ಈ ಹಿಂದೆ ಗಾನವಿ ಜೊತೆ ಜೈಲು ಸೇರಿದಂತೆ ಈಗ ಎರಡನೇ ಬಾರಿಗೆ ಜೈಲುಪಾಲಾಗಿದ್ದಾರೆ.

ಮಂಜನ ಈ ವರ್ತನೆಗೆ ಮನೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. “ಸೋಲನ್ನು ಹೇಗೆ ಸ್ವೀಕರಿಸಬೇಕೋ ಹಾಗೆ ಸ್ವೀಕರಿಸಬೇಕು, ಬಳಸುವ ಪದಗಳಿಗೆ ಮಿತಿ ಇರಬೇಕು” ಎಂದು ಯಶಸ್‌ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. “ಟಾಸ್ಕ್‌ ಪ್ರಾಪರ್ಟೀಸ್‌ ಮುರಿಯುವುದು ಹಾಗೂ ನಿಯಮ ಉಲ್ಲಂಘಿಸುವುದು ತಪ್ಪು” ಎಂದು ಪ್ರಶಾಂತ್‌ ಅಸಮಾಧಾನ ವ್ಯಕ್ತಪಡಿಸಿದರೆ, “ಇದು ಯಾವ ಕೀಳುಮಟ್ಟಕ್ಕೆ ಹೋಗುತ್ತಿದೆ” ಎಂದು ಸೌಂದರ್ಯ ತೀವ್ರವಾಗಿ ಕಿಡಿಕಾರಿದರು.