SK Home Ad
Home ಕ್ರೀಡೆ IPLನಲ್ಲಿ ಶುರುವಾಗಲಿದೆ ‘ದಾದಾಗಿರಿ’: ಡೆಲ್ಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ!

IPLನಲ್ಲಿ ಶುರುವಾಗಲಿದೆ ‘ದಾದಾಗಿರಿ’: ಡೆಲ್ಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ!

0
19

IPL: ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಮೊದಲ ಬಾರಿಗೆ ಹೆಡ್ ಕೋಚ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. 2027ರ ಐಪಿಎಲ್ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ (DC) ಫ್ರಾಂಚೈಸಿಯು ‘ದಾದಾ’ ಅವರನ್ನು ತಮ್ಮ ಮುಖ್ಯ ಕೋಚ್ ಆಗಿ ಅಧಿಕೃತವಾಗಿ ಘೋಷಿಸಿದೆ. ಈ ಹಿಂದೆ ತಂಡದ ನಿರ್ದೇಶಕ ಹಾಗೂ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದ ಗಂಗೂಲಿ, ಹೇಮಂಗ್ ಬದಾನಿ ಅವರಿಂದ ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

“ಇನ್ನು ಮುಂದೆ ಕೇವಲ ಹೊರಗಿನಿಂದ ಮಾರ್ಗದರ್ಶನ ನೀಡುವುದಷ್ಟೇ ಅಲ್ಲ, ಮೈದಾನದಲ್ಲಿ ನೇರವಾಗಿ ಅಖಾಡಕ್ಕಿಳಿಯುವ ಸಮಯ ಬಂದಿದೆ; ಹುಲಿ ಮತ್ತೆ ಮರಳಿದೆ” ಎಂದು ಗಂಗೂಲಿ ಅಧಿಕೃತ ವಿಡಿಯೋದಲ್ಲಿ ತಿಳಿಸಿದ್ದಾರೆ. 2008ರಿಂದಲೂ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಹಾತೊರೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್, ಗಂಗೂಲಿ ಅವರ ಆಕ್ರಮಣಕಾರಿ ನಾಯಕತ್ವ ಹಾಗೂ ಚಾಣಾಕ್ಷ ತಂತ್ರಗಾರಿಕೆಯ ನೆರವಿನಿಂದ ಪ್ರಶಸ್ತಿ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಗಂಗೂಲಿ ಜೊತೆಗೆ ಡೆಲ್ಲಿ ತಂಡದ ಸಹಾಯಕ ಸಿಬ್ಬಂದಿ ವರ್ಗವೂ ಸ್ಟಾರ್ ಆಟಗಾರರಿಂದ ಕೂಡಿದೆ. ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಬ್ಯಾಟಿಂಗ್ ಕೋಚ್ ಆಗಿ, ಶ್ರೀಲಂಕಾದ ಮಾಜಿ ವೇಗಿ ಚಮಿಂಡಾ ವಾಸ್ ವೇಗದ ಬೌಲಿಂಗ್ ಕೋಚ್ ಆಗಿ ಹಾಗೂ ಅಮಿತ್ ಮಿಶ್ರಾ ಸ್ಪಿನ್ ಬೌಲಿಂಗ್ ವಿಭಾಗದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜೊತೆಗೆ, ಲಕ್ನೋ ಸೂಪರ್ ಜೈಂಟ್ಸ್‌ನಿಂದ ರಿಷಭ್ ಪಂತ್ ಮತ್ತೆ ಡೆಲ್ಲಿ ಗೂಡಿಗೆ ಮರಳುತ್ತಿದ್ದು, ನಾಯಕ ಅಕ್ಷರ್ ಪಟೇಲ್ ನೇತೃತ್ವದಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ದಾದಾ ಮೆಗಾ ಹರಾಜಿನ ತಂತ್ರ ರೂಪಿಸಲಿದ್ದಾರೆ.