SK Home Ad
Home ಸಿನಿ ಮಿಲ್ಸ್ ಬಿಗ್‌ಬಾಸ್ 13: ಮಂಜನಿಗೆ ಹೈಜಾಕರ್‌ ಗಾನವಿ ಸಖತ್ ಕಾಂಪಿಟೇಷನ್; ಇಬ್ಬರೂ ಜೈಲು ಪಾಲು!

ಬಿಗ್‌ಬಾಸ್ 13: ಮಂಜನಿಗೆ ಹೈಜಾಕರ್‌ ಗಾನವಿ ಸಖತ್ ಕಾಂಪಿಟೇಷನ್; ಇಬ್ಬರೂ ಜೈಲು ಪಾಲು!

0
12

ಬಿಗ್‌ಬಾಸ್ ಕನ್ನಡ ಸೀಸನ್ 13ರ ಆರಂಭದ ವಾರಗಳಲ್ಲಿ ಸ್ಪರ್ಧಿ ಮಂಜನ ಅನಗತ್ಯ ಜಗಳ, ವೈಯಕ್ತಿಕ ದಾಳಿ ಹಾಗೂ ಗಲಾಟೆಗಳೇ ಮನೆಯಲ್ಲ ಪ್ರಮುಖವಾಗಿದ್ದವು. ಕಿಚ್ಚ ಸುದೀಪ್ ಗಂಭೀರ ಎಚ್ಚರಿಕೆ ಸಿಕ್ಕ ಬಳಿಕ ಮಂಜ ತುಸು ಶಾಂತವಾಗಿದ್ದರಾದರೂ, ಇದೀಗ ಪ್ರಬಲ ಪೈಪೋಟಿ ನೀಡಲು ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ದಿನ ಶಾಂತವಾಗಿದ್ದ ಗಾನವಿ, ತದನಂತರ ತಮ್ಮ ಅಸಲಿ ರೂಪ ತೋರಿಸಲು ಪ್ರಾರಂಭಿಸಿದ್ದಾರೆ.

ಶುಕ್ರವಾರದ ಎಪಿಸೋಡ್‌ನಲ್ಲಿ ನಡೆದ ಕಳಪೆ ಆಯ್ಕೆ ಪ್ರಕ್ರಿಯೆಯಲ್ಲಿ ಮಂಜ ಮತ್ತು ಗಾನವಿ ಇಬ್ಬರೂ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾದರು. ಕ್ಯಾಪ್ಟೆನ್ಸಿ ಓಟದ ಉಸ್ತುವಾರಿಯಲ್ಲಿ ಎಡವಟ್ಟು ಮಾಡಿದ ಕಾರಣಕ್ಕೆ ಮಂಜನಿಗೆ ಹಲವರು ಕಳಪೆ ನೀಡಿದರೆ, ಅನಗತ್ಯ ವಿತಂಡ ವಾದ ಹಾಗೂ ನಾಲಗೆ ಹರಿಬಿಟ್ಟಿದ್ದಕ್ಕಾಗಿ ಗಾನವಿ ಹೆಸರನ್ನು ಯಶಸ್, ಗಗನ್ ಮತ್ತು ಶಾಸ್ತ್ರಿ ಸೇರಿದಂತೆ ಹಲವರು ಆಯ್ಕೆ ಮಾಡಿದರು. ಸೂಕ್ತ ಕಾರಣ ನೀಡಿದರೂ ಒಪ್ಪದ ಗಾನವಿ, ಎಲ್ಲರ ಮೇಲೆಯೂ ಜೋರು ಧ್ವನಿಯಲ್ಲಿ ವಾದಕ್ಕಿಳಿದರು.

ವಿಶೇಷವಾಗಿ ಶಾಸ್ತ್ರಿಗೆ ಗಾನವಿ ನೀಡಿದ ತಿರುಗೇಟು ಇಡೀ ಮನೆಯನ್ನು ವಿರುದ್ಧ ತಿರುಗಿಬೀಳುವಂತೆ ಮಾಡಿತು. ಸ್ಪರ್ಧಿಗಳು ಗಾನವಿ ಹೆಸರು ಹೇಳಿದಾಗಲೆಲ್ಲಾ ಉಳಿದವರು ಚಪ್ಪಾಳೆ ತಟ್ಟಿ ಬೆಂಬಲಿಸಿದ್ದು, ಅವರ ವರ್ತನೆಗೆ ಮನೆಮಂದಿ ಎಷ್ಟು ಬೇಸತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಅಂತಿಮವಾಗಿ ಮಂಜ ಮತ್ತು ಗಾನವಿ ಇಬ್ಬರಿಗೂ ಸಮಾನ ಓಟುಗಳು ಬಂದಿದ್ದರಿಂದ, ಇಬ್ಬರನ್ನೂ ಜೈಲಿಗೆ ಕಳುಹಿಸಲಾಯಿತು.

ಇಷ್ಟು ದಿನ ಮಂಜನ ರಾದ್ಧಾಂತದಿಂದ ತಲೆಬಿಸಿ ಮಾಡಿಕೊಂಡಿದ್ದ ವೀಕ್ಷಕರಿಗೆ ಈಗ ಗಾನವಿಯ ರೂಪದಲ್ಲಿ ಮತ್ತೊಬ್ಬ ಅಬ್ಬರದ ಸ್ಪರ್ಧಿ ಸಿಕ್ಕಂತಾಗಿದೆ. ಮುಂಬರುವ ದಿನಗಳಲ್ಲಿ ಇವರಿಬ್ಬರ ಪಾಯಿಂಟ್‌ಲೆಸ್ ಜಗಳ ಯಾವ ಹಂತ ತಲುಪಲಿದೆ ಮತ್ತು ಮನೆಮಂದಿ ಗಾನವಿಯ ಆಟವನ್ನು ಹೇಗೆ ಎದುರಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.