SK Home Ad
Home ನಮ್ಮ ಜಿಲ್ಲೆ ಬೀದರ್ ಬಿಜೆಪಿಗೆ 362 ಸೀಟು ಸಿಕ್ಕರೆ ಸಂವಿಧಾನಕ್ಕೆ ಅಪಾಯ: ಸಂಸದ ಖಂಡ್ರೆ ಎಚ್ಚರಿಕೆ

ಬಿಜೆಪಿಗೆ 362 ಸೀಟು ಸಿಕ್ಕರೆ ಸಂವಿಧಾನಕ್ಕೆ ಅಪಾಯ: ಸಂಸದ ಖಂಡ್ರೆ ಎಚ್ಚರಿಕೆ

0
70

ಬೀದರ್: `ಕೇಂದ್ರದಲ್ಲಿ ಟು ಥರ್ಡ್ ಮೆಜಾರಿಟಿಗಾಗಿ ಬಿಜೆಪಿ ಇನ್ನಿಲ್ಲದ ತಂತ್ರಗಾರಿಕೆ ನಡೆಸುತ್ತಿದೆ. ಬೇರೆ ಬೇರೆ ಪಕ್ಷಗಳ ಸಂಸದರ ಖರೀದಿಗೆ ಮುಂದಾಗಿದೆ. ಒಂದೊಮ್ಮೆ ಟು ಥರ್ಡ್ ಮೆಜಾರಿಟಿ 362 ಸ್ಥಾನ ಪಡೆದುಕೊಂಡಲ್ಲಿ ಸಂವಿಧಾನ ಬದಲಿಸುವುದಕ್ಕೂ ಬಿಜೆಪಿ ಹಿಂದೇಟು ಹಾಕಲ್ಲ’ ಎಂದು ಸಂಸದ ಸಾಗರ್ ಈಶ್ವರ ಖಂಡ್ರೆ ಎಚ್ಚರಿಸಿದ್ದಾರೆ.

ಬೀದರ್‌ನಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಬಿಜೆಪಿಯವರು ಸಂವಿಧಾನವನ್ನೇ ತಮ್ಮ ಹಿಡಿತದಲ್ಲಿರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಟಿಎಂಸಿಯ 28 ಸಂಸದರಲ್ಲಿ 21 ಸಂಸದರಿಗೆ ಬೇರೆ ಗ್ರೂಪ್ ಮಾಡಿದ್ದಾರೆ. ಶಿವಸೇನಾದ 9 ಸಂಸದರಲ್ಲಿ 6 ಸಂಸದರನ್ನು ಸೆಳೆದಿದ್ದಾರೆ. ಬೇರೆ ಪಕ್ಷಗಳ ಇನ್ನೂ ಹಲವು ಸಂಸದರ ಖರೀದಿಗೆ ಗಾಳ ಬೀಸಿದ್ದಾರೆ. 362 ಸ್ಥಾನ ಪಡೆದಲ್ಲಿ ಅವರಿಗೆ ಸಂವಿಧಾನ ಬದಲಿಸಲು ಶಕ್ತಿ ಸಿಗಲಿದ್ದು, ಬಳಿಕ ಬೇಕಾಗಿದ್ದನ್ನು ಮಾಡಬಹುದು. ಇದಕ್ಕೆ ನಾವ್ಯಾರೂ ಅವಕಾಶ ಕೊಡಬಾರದು ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬಿಜೆಪಿಯು ಎಸ್‌ಐಆರ್ ಬಳಸಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳ ಬಳಿಕ ಕರ್ನಾಟಕವೇ ಅವರ ಗುರಿಯಾಗಿದೆ. ಹೀಗಾಗಿ ಭಾಲ್ಕಿ ಸೇರಿದಂತೆ ಅನೇಕ ಕಡೆ ಸಹಸ್ರಾರು ಅರ್ಹ ಮತದಾರರ ಹೆಸರು ಕಟ್ ಮಾಡುವುದಕ್ಕೆ ಷಡ್ಯಂತ್ರ ರೂಪಿಸಿದ್ದಾರೆ. ಇದರ ವಿರುದ್ಧ ದಿಲ್ಲಿಯಿಂದ, ಹಳ್ಳಿಯಿಂದ ಎಲ್ಲೆಡೆ ಹೋರಾಟ ನಡೆಯಬೇಕಿದೆ. ಚುನಾವಣಾ ಆಯೋಗ ವಿರುದ್ಧ ಅ. 5ರಂದು ದಿಲ್ಲಿಯಲ್ಲಿ ಬೃಹತ್ ಆಂದೋಲನ ನಡೆಯಲಿದೆ ಎಂದರು.