SK Home Ad
Home ಸುದ್ದಿ ರಾಜ್ಯ ‘ನಮ್ಮನ್ನು ಜೈಲಿಗಟ್ಟಲಿ, ಗಲ್ಲಿಗೇರಿಸಲಿ…’ ವಂದೇ ಮಾತರಂ ಬಗ್ಗೆ ಹರಿಪ್ರಸಾದ್ ಗುಡುಗು

‘ನಮ್ಮನ್ನು ಜೈಲಿಗಟ್ಟಲಿ, ಗಲ್ಲಿಗೇರಿಸಲಿ…’ ವಂದೇ ಮಾತರಂ ಬಗ್ಗೆ ಹರಿಪ್ರಸಾದ್ ಗುಡುಗು

0
6

ಬೆಂಗಳೂರು: `ವಂದೇ ಮಾತರಂ’ ಗೀತೆಯನ್ನು ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ರಾಜ್ಯ ಸರ್ಕಾರದ ಆದೇಶಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟಪಡಿಸಿದ್ದಾರೆ.

ಸಿಎಂ ಡಿಕೆ ಶಿವಕುಮಾರ್, `ವಂದೇ ಮಾತರಂ’ ವಿಚಾರದಲ್ಲಿ ನಮ್ಮ ಪಕ್ಷದ ನಿಲುವು ಬಹಳ ಹಿಂದಿನಿಂದಲೂ ಸ್ಪಷ್ಟವಾಗಿದೆ. ವಂದೇ ಮಾತರಂ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮತ್ತು ಸಂವಿಧಾನಕ್ಕೆ ಕಾಂಗ್ರೆಸ್ ಪಕ್ಷ ಯಾವತ್ತೂ ಗೌರವ ನೀಡುತ್ತದೆ. ಆದರೆ ಬಿಜೆಪಿಯವರು ಈ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ನಮ್ಮನ್ನು ಜೈಲಿಗೆ ಕಳುಹಿಸಲಿ ಅಥವಾ ಗಲ್ಲಿಗೆ ಹಾಕಲಿ, ನಾವು ಹೇಳೋದು ವಂದೇ ಮಾತರಂನ ಎರಡೇ ಪ್ಯಾರಾ. ಅದು ಈ ದೇಶದ ಏಕತೆಗಾಗಿ ಮಾಡಿರುವ ನಿರ್ಧಾರ. ಸ್ವಾತಂತ್ರ್ಯ ಹೋರಾಟದ ಘೋಷಣೆ ಅದು. ಬ್ರಿಟಿಷರ ಬೂಟು ನೆಕ್ಕುವವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೇಕಿದ್ದರೆ ಚಡ್ಡಿ ಹಾಕಿಕೊಂಡು ತಲೆಗೆ ಟೋಪಿ ಹಾಕಿಕೊಂಡು. ದೊಣ್ಣೆ ಹಿಡಿದುಕೊಂಡು ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲಿ. ಇವರು ಒಂದೇ ಒಂದು ದಿನ ಜನಗಣಮನ ಹೇಳಲ್ಲ. ಇವರು ಒಂದೇ ಒಂದು ದಿನ ಗಾಂಧಿ ಹೆಸರೂ ಹೇಳಲ್ಲ. ಇವರಿಗೆ ವಂದೇ ಮಾತರಂ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ. ಈ ವಿಚಾರವಾಗಿ ಚರ್ಚೆಗೆ ಬರೋದಾದರೆ ಬರಲಿ. ಇವರು ಬ್ರಿಟಿಷ್ ಏಜೆಂಟ್‌ಗಳಾಗಿದ್ದರು ಎಂದು ಕಿಡಿಕಾರಿದರು.