SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಕುರಿಗಾಹಿಗಳ ಜತೆ ಕಂಬಳಿ ಹೊದ್ದು, ಕುರಿಮರಿ ಎತ್ತಿಕೊಂಡ ವಿಜಯೇಂದ್ರ

ಕುರಿಗಾಹಿಗಳ ಜತೆ ಕಂಬಳಿ ಹೊದ್ದು, ಕುರಿಮರಿ ಎತ್ತಿಕೊಂಡ ವಿಜಯೇಂದ್ರ

0
45

ಕೊಪ್ಪಳ: ‘ಬಳ್ಳಾರಿ ಚಲೋ’ ಪಾದಯಾತ್ರೆಯ ಆರನೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾನುವಾರ ಮರಳಿ ಗ್ರಾಮದಲ್ಲಿ ಕುರಿಗಾಹಿಗಳ ಬಿಡಾರಕ್ಕೆ ತೆರಳಿ, ಅವರೊಂದಿಗೆ ಆತ್ಮೀಯವಾಗಿ ಬೆರೆತು ಸಮಸ್ಯೆಗಳನ್ನು ಆಲಿಸಿದರು.

ಪಾದಯಾತ್ರೆ ಆರಂಭಕ್ಕೂ ಮುನ್ನ ಕುರಿಗಾಹಿಗಳ ಬಿಡಾರಕ್ಕೆ ಭೇಟಿ ನೀಡಿದ ವಿಜಯೇಂದ್ರ ಅವರು, ಅವರೊಂದಿಗೆ ಚಹಾ ಸೇವಿಸಿ ಕುರಿ ಸಾಕಾಣಿಕೆಯಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಮಳೆಗಾಲದಲ್ಲಿ ಕುರಿಗಳೊಂದಿಗೆ ಬಿಡಾರದಲ್ಲೇ ವಾಸಿಸುವಾಗ ಎದುರಾಗುವ ತೊಂದರೆ, ಕುರಿಗಳಿಗೆ ಮೇವು- ನೀರು, ಸಾಕಾಣಿಕೆ ವೆಚ್ಚ ಹಾಗೂ ಕುಟುಂಬ ನಿರ್ವಹಣೆಯ ಸವಾಲುಗಳ ಬಗ್ಗೆ ಕುರಿಗಾಹಿಗಳು ತಮ್ಮ ಅಹವಾಲುಗಳನ್ನು ವಿಜಯೇಂದ್ರ ಅವರೊಂದಿಗೆ ಹಂಚಿಕೊಂಡರು.

ಕುರಿಗಾಹಿಗಳ ಸಮಸ್ಯೆಗಳನ್ನು ಆಲಿಸಿದ ವಿಜಯೇಂದ್ರ ಅವರು ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಕುರಿಗಾಹಿಗಳ ಮಕ್ಕಳಿಗೆ ಸಿಹಿ ತಿಂಡಿ, ಬಿಸ್ಕತ್ ಹಾಗೂ ಹಣ್ಣುಗಳನ್ನು ವಿತರಿಸಿದರು.

ಕುರಿಗಾಹಿಗಳ ಜೀವನಶೈಲಿಯೊಂದಿಗೆ ಬೆರೆತ ಅವರು ಕಂಬಳಿ ಹೊದ್ದು, ಕುರಿಮರಿಯನ್ನು ಕೈಯಲ್ಲಿ ಎತ್ತಿಕೊಂಡು ಕೆಲಕಾಲ ಕಳೆದದ್ದು ಗಮನ ಸೆಳೆಯಿತು. ಪಾದಯಾತ್ರೆಯ ರಾಜಕೀಯ ಅಬ್ಬರದ ನಡುವೆ ಗ್ರಾಮೀಣ ಬದುಕಿನ ಸಂಕಷ್ಟಗಳನ್ನು ಅರಿಯುವ ಪ್ರಯತ್ನವಾಗಿ ವಿಜಯೇಂದ್ರ ಅವರ ಕುರಿಗಾಹಿಗಳ ಭೇಟಿಯು ಕಂಡುಬಂದಿತು.