SK Home Ad
Home ನಮ್ಮ ಜಿಲ್ಲೆ ಧಾರವಾಡ ಆರು ವರ್ಷಗಳ ಬಳಿಕ ಧಾರವಾಡಕ್ಕೆ ವಿನಯ್ ಕುಲಕರ್ಣಿ ಭೇಟಿ

ಆರು ವರ್ಷಗಳ ಬಳಿಕ ಧಾರವಾಡಕ್ಕೆ ವಿನಯ್ ಕುಲಕರ್ಣಿ ಭೇಟಿ

0
100
ಆರು ವರ್ಷಗಳ ಬಳಿಕ ಧಾರವಾಡಕ್ಕೆ ವಿನಯ್ ಕುಲಕರ್ಣಿ; ಮೂರುಘಾ ಮಠದಲ್ಲಿ ವಿಶೇಷ ಪೂಜೆ

ಧಾರವಾಡ: ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡ ಬಳಿಕ ಸುಮಾರು ಆರು ವರ್ಷಗಳ ನಂತರ ಧಾರವಾಡಕ್ಕೆ ಆಗಮಿಸಿದ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಅವರು ಇಂದು ಮುಂಜಾನೆ ಮೂರುಘಾ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಮೂರುಘಾ ಮಠಕ್ಕೆ ಆಗಮಿಸಿದ ಶಾಸಕ ವಿನಯ್ ಕುಲಕರ್ಣಿ ಅವರನ್ನು ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಜನರು ಹಾಗೂ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದರು. ಇದೇ ವೇಳೆ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಮಹಿಳಾ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶಾಸಕ ವಿನಯ್ ಕುಲಕರ್ಣಿ ಅವರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಶುಭಾಶಯ ಕೋರಿದರು.

ಮಹಿಳೆಯರ ಆತ್ಮೀಯತೆಗೆ ವಿನಯ್ ಕುಲಕರ್ಣಿ ಅವರು ಕೃತಜ್ಞತೆ ಸಲ್ಲಿಸಿದರು. ಹೈಕೋರ್ಟ್‌ನಿಂದ ಧಾರವಾಡ ಪ್ರವೇಶಕ್ಕೆ ಅನುಮತಿ ಹಾಗೂ ಜಾಮೀನು ದೊರೆತ ಹಿನ್ನೆಲೆಯಲ್ಲಿ ಹಲವು ವರ್ಷಗಳ ಬಳಿಕ ತವರು ಕ್ಷೇತ್ರಕ್ಕೆ ಆಗಮಿಸಿರುವ ವಿನಯ್ ಕುಲಕರ್ಣಿ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣ ಕಂಡುಬಂತು.

ಬಳಿಕ ಮೂರುಘಾ ಮಠದ ಶಾಲೆಯ ಕಾಮಗಾರಿ ವೀಕ್ಷಣೆ ಮಾಡಿದರು. ಮೂರುಘಾ ಮಠದ ಭೇಟಿಯ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಮಹಿಳಾ‌ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ, ಮಾದೇವಿ ಬ್ಯಾಳಿ, ಮಂಜುಳಾ ಸುರಣ್ಣವರ, ಶೋಭಾ ಕರಿಸುಬ್ಬನವರ, ವಿಜಯಲಕ್ಷ್ಮಿ ಮಲ್ಲಿಗವಾಧ, ಸುಶೀಲ ಹಿರೇಮಠ, ಉಮಾ ಅಂಗಡಿ, ವಿಜಯಲಕ್ಷ್ಮಿ ಅನಾಡ್, ಪದ್ಮಾ ಕಮ್ಮಾರ್, ಶಾರದಾ ನಿಗದಿ, ಆಶಾ ಕದಂ,ಸವಿತಾ ಶಿಂದೆ ಆಕಾಶ್ ಅನಾಡ್, ದಯಾನಂದ್ ಮೇಟಿ,ಗಿರೀಶ್ ಗೌಡ ಪಾಟೀಲ್,ಕಲ್ಮೇಶ ಮಲ್ಲಿಗವಾಡ,ಅಶೋಕ್ ಗಾಣಿಗೇರ ಹಾಗೂ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮಹಿಳಾ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.