SK Home Ad
Home ನಮ್ಮ ಜಿಲ್ಲೆ ದಾವಣಗೆರೆ ರೈತರ ಸಂಕಷ್ಟದ ನಡುವೆ ಸಚಿವರು ವಿದೇಶ ಪ್ರವಾಸ

ರೈತರ ಸಂಕಷ್ಟದ ನಡುವೆ ಸಚಿವರು ವಿದೇಶ ಪ್ರವಾಸ

0
23

ದಾವಣಗೆರೆ: ಜಿಲ್ಲೆಯ ಜನರು ಬರ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಬರ-ನೆರೆ ಅಧ್ಯಯನಕ್ಕೆ ಸರ್ಕಾರ ನೇಮಿಸಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಟೀಕಿಸಿದರು.

ದಾವಣಗೆರೆಯಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ಬರ ಹಾಗೂ ಬೆಳೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವಾಗ ಸಚಿವರು ಮಜಾ ಮಾಡಲು ವಿದೇಶಕ್ಕೆ ಹೋಗಿದ್ದಾರೆ. ಅವರು ಪದೇ ಪದೆ ವಿದೇಶಕ್ಕೆ ತೆರಳುತ್ತಲೇ ಇರುತ್ತಾರೆ. ಆದ್ದರಿಂದ ಸರ್ಕಾರ ಅವರ ಬದಲಿಗೆ ಯುವ ಸಚಿವ ಕೆ.ಎಸ್. ಬಸವಂತಪ್ಪ ಅವರನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಿದರೆ ರೈತರ ಒಂದಿಷ್ಟು ಸಮಸ್ಯೆಗಳಾದರೂ ಬಗೆಹರಿಯಲಿವೆ ಎಂದರು.

ಭದ್ರಾ ಅಚ್ಚುಕಟ್ಟಿನ ರೈತರಿಗೆ ಭತ್ತದ ಬೆಳೆ ಬೆಳೆಯಲು ನೀರು ಹರಿಸಬೇಕು. ನೀರಿಗಾಗಿ ರೈತರು ನಡೆಸುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಭತ್ತದ ಬೆಳೆಗೆ ನೀರು ನೀಡದಿದ್ದರೆ ವಿಧಾನಸಭೆ ಅಧಿವೇಶನದಲ್ಲಿಯೂ ಈ ವಿಚಾರವಾಗಿ ಹೋರಾಟ ನಡೆಸಲಾಗುವುದು. ಅಗತ್ಯಬಿದ್ದರೆ ವಿಧಾನಸೌಧದ ಬಳಿಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಬಿ.ಪಿ. ಹರೀಶ್ ಎಚ್ಚರಿಸಿದರು.