SK Home Ad
Home ಸುದ್ದಿ ದೇಶ ಕೊನೆಗೂ ಕ್ಷಮೆ ಯಾಚಿಸಿದ ಮಾರ್ಕ್ ಜುಕರ್‌ಬರ್ಗ್

ಕೊನೆಗೂ ಕ್ಷಮೆ ಯಾಚಿಸಿದ ಮಾರ್ಕ್ ಜುಕರ್‌ಬರ್ಗ್

0
20

ನವದೆಹಲಿ: ಮೆಟಾ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಕಂಟೆಂಟ್‌ಗಳನ್ನು ಹೆಚ್ಚು ಜನರಿಗೆ ತಲುಪಿಸಲು ಭಾರಿ ಪ್ರಮಾಣದ ಹಣ ಪಾವತಿಯಾಗಿರುವುದನ್ನು ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ, ಪ್ಲಾಟ್‌ಫಾರ್ಮ್ ಕಾರ್ಯಾಚರಣೆಯಲ್ಲಾದ ಲೋಪಗಳು, ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ತೆಗೆದುಹಾಕಿದ್ದು ಹಾಗೂ ಡೀಪ್‌ಫೇಕ್ ವೈರಲ್ ವಿಚಾರವಾಗಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಕ್ಷಮೆ ಯಾಚಿಸಿದ್ದಾರೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮತ್ತು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಅವರೊಂದಿಗೆ ಮೆಟಾ ಜಾಗತಿಕ ನಿಯೋಗ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ಬೆಳವಣಿಗೆ ನಡೆದಿದೆ. ಮೆಟಾ ಸಂಸ್ಥೆಯು ತನ್ನ ಅಲ್ಗಾರಿದಮ್ ಬಳಸಿ ಕೆಲವು ನಿರ್ದಿಷ್ಟ ವರ್ಗದ ವಿಷಯಗಳನ್ನು ಉತ್ತೇಜಿಸಲು ಹಾಗೂ ಪ್ರಚಾರ ಮಾಡಲು ಹೆಚ್ಚಿನ ಮೊತ್ತದ ಹಣ ವಹಿವಾಟು ನಡೆದಿರುವುದನ್ನು ಒಪ್ಪಿಕೊಂಡಿದೆ. ಮೆಟಾ ಸಂಸ್ಥೆಯು ಕೇವಲ ಮಧ್ಯಸ್ಥಗಾರ ಅಲ್ಲ, ಬದಲಿಗೆ ಬಳಕೆದಾರರಿಗೆ ಯಾವ ವಿಷಯ ತಲುಪಬೇಕು ಎಂಬುದನ್ನು ತಾನೇ ನಿರ್ಧರಿಸುವುದರಿಂದ, ಐಟಿ ಕಾಯ್ದೆಯಡಿ ಸಿಗುವ ‘ಸೇಫ್ ಹಾರ್ಬರ್’ ರಕ್ಷಣಾ ಹಕ್ಕು ದಕ್ಕುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯುವಜನರನ್ನು ಉದ್ದೇಶಿಸಿ ಮಾತನಾಡಿದ್ದ ವಿಡಿಯೋವನ್ನು ಫೇಸ್‌ಬುಕ್ ಸುಮಾರು 5 ಗಂಟೆಗಳ ಕಾಲ ಬ್ಲಾಕ್ ಮಾಡಿತ್ತು. ಇದಕ್ಕೆ ಮೆಟಾ ಕ್ಷಮೆಯಾಚಿಸಿದ್ದು, ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಸಮಜಾಯಿಷಿ ನೀಡಿದೆ. ಈ ಸಂಬಂಧ ಸಂಸದೀಯ ತಂತ್ರಜ್ಞಾನ ಸಮಿತಿಯು ಮಾರ್ಕ್ ಜುಕರ್‌ಬರ್ಗ್ ಅವರು ಕ್ಷಮೆಯಾಚಿಸದಿದ್ದಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಗಡುವು ನೀಡಿ ಎಚ್ಚರಿಸಿತ್ತು. ಈ ಬೆನ್ನಲ್ಲೇ ಅವರು ಕೇಂದ್ರ ಸರ್ಕಾರದ ಕ್ಷಮೆ ಕೇಳಿದ್ದಾರೆ.