ರಚಿತಾ ರಾಮ್, ನೀನಾಸಂ ಸತೀಶಗೆ ಹುಬ್ಬಳ್ಳಿಯಲ್ಲಿ ಅದ್ದೂರಿ ಸ್ವಾಗತ; ಜಾನಪದ ಕಲಾ ತಂಡಗಳೊಂದಿಗೆ ‘ಅಯೋಗ್ಯ-2’ ಚಿತ್ರತಂಡದ ಮೆರವಣಿಗೆ
ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ‘ಅಯೋಗ್ಯ-2’ ಚಿತ್ರದ ಹಾಡೊಂದು ಬಿಡುಗಡೆಯಾಗಲಿದೆ. ಈ ಸಮಾರಂಭ ಮತ್ತು ವರ್ಣರಂಜಿತ ಮೆರವಣಿಗೆ ಜುಲೈ 19ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸಿ.ಬಿ.ಎಫ್.ಸಿ. ಮಾಜಿ ನಿರ್ದೇಶಕ ಶಿವಾನಂದ ಮುತ್ತಣ್ಣವರ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟಿ ರಚಿತಾ ರಾಮ್ ಮತ್ತು ನಟ ನೀನಾಸಂ ಸತೀಶ ಅಭಿನಯದ ಈ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದ್ದು, ಅದರ ಅಂಗವಾಗಿ ಉತ್ತರ ಕರ್ನಾಟಕದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಚಲಿಸುವ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ನಿಧನ
ಮಧ್ಯಾಹ್ನ ಮೆರವಣಿಗೆ : ಜುಲೈ 19ರಂದು ಮಧ್ಯಾಹ್ನ 2 ಗಂಟೆಗೆ ದೇಶಪಾಂಡೆ ನಗರ ಸರ್ಕಲ್‌ನ ಶಾರದಾ ಹೋಟೆಲ್ ಮುಂಭಾಗದಿಂದ ರಚಿತಾ ರಾಮ್ ಹಾಗೂ ನೀನಾಸಂ ಸತೀಶ ಅವರನ್ನು ಜಾನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸವಾಯಿ ಗಂಧರ್ವ ಹಾಲ್‌ಗೆ ಕರೆತರಲಾಗುತ್ತದೆ. ಮೆರವಣಿಗೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಭಾಗವಹಿಸಲಿದ್ದು, ಉತ್ತರ ಕರ್ನಾಟಕದ ಸಾಂಪ್ರದಾಯಿಕ ಕಲಾ ವೈಭವವೂ ಅನಾವರಣಗೊಳ್ಳಲಿದೆ.
ಸಂಜೆ ಹಾಡು ಬಿಡುಗಡೆ : ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ವಿಜಯ ಪ್ರಕಾಶ್ ಹಾಡಿರುವ ಗೀತೆಯನ್ನು ಅನಾವರಣ ಮಾಡಲಾಗುತ್ತಿದೆ. ಈ ಸಮಾರಂಭವನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: ಬಂಟ್ವಾಳ ಯುವತಿ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಆರೋಪಿ ಬಂಧನ
ಕಾರ್ಯಕ್ರಮದಲ್ಲಿ: ನಿರ್ಮಾಪಕ ಎಂ. ಮುನೇಗೌಡ, ನಿರ್ದೇಶಕ ಎಸ್. ಮಹೇಶಕುಮಾರ, ನಟ ರವಿ ಶಂಕರ್, ಗಿರಿ ಶಿವಣ್ಣ, ಎ.ಆರ್. ಪೇಟೆ ಶಿವರಾಜ, ಹಾಗೂ ಚಿತ್ರದ ಇತರ ಕಲಾವಿದರು ಮತ್ತು ತಾಂತ್ರಿಕ ಸಿಬ್ಬಂದಿ ಭಾಗವಹಿಸಲಿದ್ದಾರೆ.
ಗಣ್ಯರ ಉಪಸ್ಥಿತಿ : ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಐದು ವಿಮಾನ ನಿಲ್ದಾಣಗಳ ನಾಮಕರಣ ಸಮಿತಿಯ ಯುವ ಅಧ್ಯಕ್ಷ ಶ್ರೀಗಂಧ ಶೆಟ್ಟಿ, ಅನೀಲಕುಮಾರ ಪಾಟೀಲ, ಚಂದ್ರಶೇಖರ ಜುಟ್ಟಲ್, ಅಡಿವೆಪ್ಪ ಶಿವಳ್ಳಿ, ಸಮಾಜಸೇವಕಿ ವಿದ್ಯಾ ಶೆಟ್ಟಿ, ಮಲ್ಲಿಕಾರ್ಜುನ ಕುನ್ನೂರ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ‘ಏನೇ ಆದರೂ ಜುಲೈ 20ರವರೆಗೆ ಜೀವಂತವಾಗಿರುತ್ತೇನೆ’: ವಾಂಗ್‌ಚುಕ್
ಸಂಗೀತ ಕಾರ್ಯಕ್ರಮವೂ ವಿಶೇಷ ಆಕರ್ಷಣೆ : ಕಾರ್ಯಕ್ರಮದ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಗುರು ಚಲವಾದಿ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿತ್ರಪ್ರೇಮಿಗಳಿಗೆ ಮನರಂಜನೆಯ ವಿಶೇಷ ಔತಣ ಸಿಗಲಿದೆ. ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚಿತ್ರತಂಡ ಆಹ್ವಾನಿಸಿದೆ.























