SK Home Ad
Home ಕ್ರೀಡೆ BCCI ನಿಂದ ವೈಭವ್ ಗೆ ಸಿಕ್ತು ಜೆರ್ಸಿ: ಬಾಲ್ಯದ ಬಹುದೊಡ್ಡ ಕನಸು; ಕಂಬನಿ ಮಿಡಿದ ಬಾಲ...

BCCI ನಿಂದ ವೈಭವ್ ಗೆ ಸಿಕ್ತು ಜೆರ್ಸಿ: ಬಾಲ್ಯದ ಬಹುದೊಡ್ಡ ಕನಸು; ಕಂಬನಿ ಮಿಡಿದ ಬಾಲ ಕ್ರಿಕೆಟರ್

0
29

ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಟಿ20 ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಕೇವಲ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಥಾನ ಪಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಜೂನ್ 26 ರಂದು ಐರ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಂಪೂರ್ಣ ಸಜ್ಜಾಗಿದ್ದಾರೆ.

ಸದ್ಯ ಐರ್ಲೆಂಡ್‌ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಅಧಿಕೃತವಾಗಿ ‘ನಂ. 03’ರ ನೂತನ ಟೀಂ ಇಂಡಿಯಾ ಜೆರ್ಸಿಯನ್ನು ಹಸ್ತಾಂತರಿಸಿದೆ. ಈ ಹಿಂದೆ ಭಾರತದ ದಿಗ್ಗಜ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಧರಿಸುತ್ತಿದ್ದ ಮೂರನೇ ನಂಬರ್‌ನ ಜೆರ್ಸಿಯನ್ನು ಪಡೆದ ತಕ್ಷಣ ವೈಭವ್ ಭಾವುಕರಾಗಿದ್ದಾರೆ. ಹೋಟೆಲ್ ರೂಮಿನಲ್ಲಿ ಜೆರ್ಸಿ ಸ್ವೀಕರಿಸಿದ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ಬಾಲ್ಯದಿಂದಲೂ ಟೀಂ ಇಂಡಿಯಾ ಜೆರ್ಸಿ ಧರಿಸುವುದು ನನ್ನ ಬಹುದೊಡ್ಡ ಕನಸಾಗಿತ್ತು, ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ” ಎಂದು ವೈಭವ್ ತಮ್ಮ ಸಂತಸ ಹಂಚಿಕೊಂಡು, ಟ್ವೀಟ್‌ (X-ಖಾತೆ)ಯಲ್ಲಿ ಶೇರ್‌ ಮಾಡಿದ್ದಾರೆ.

ಮೊದಲು ಐಪಿಎಲ್ 2026 ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ವೈಭವ್ ಸೂರ್ಯವಂಶಿ, ಒಟ್ಟು 776 ರನ್‌ಗಳನ್ನು ಬಾರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಈ ಅಸಾಧಾರಣ ಮತ್ತು ಸ್ಫೋಟಕ ಪ್ರದರ್ಶನವನ್ನು ಪರಿಗಣಿಸಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಇವರನ್ನು ಹಿರಿಯರ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದೆ. ಜೂನ್ 26 ರಂದು ಐರ್ಲೆಂಡ್‌ನ ಬೆಲ್‌ಫಾಸ್ಟ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ವೈಭವ್ ಕಣಕ್ಕಿಳಿದರೆ, ಭಾರತದ ಪರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವೈಭವ್‌ ಮುರಿಯಲಿದ್ದಾರೆ.

ವೈಭವ್ ಇನ್ನೂ ಅಪ್ರಾಪ್ತರಾಗಿರುವುದರಿಂದ (15 ವರ್ಷ), ಹಿರಿಯ ಆಟಗಾರರ ನಡುವೆ ಕಂಫರ್ಟಬಲ್ ವಾತಾವರಣ ನಿರ್ಮಿಸುವ ಸಲುವಾಗಿ ವೈಭವ್ ಪೋಷಕರಿಗೂ ತಂಡದೊಂದಿಗೆ ಪ್ರವಾಸ ಮಾಡಲು ಬಿಸಿಸಿಐ ವಿಶೇಷ ಅನುಮತಿ ನೀಡಿದೆ. ಸದ್ಯ ತಂಡ ಸೇರಿಕೊಂಡಿರುವ ಈ ಯುವ ಆಟಗಾರ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ರಂತಹ ಅನುಭವಿಗಳೊಂದಿಗೆ ಆರಂಭಿಕ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಈ ಯಂಗ್‌ ವೈಭವ್‌ ಸ್ಫೋಟಕ ಆಟವನ್ನು ಕಣ್ತುಂಬಿಕೊಳ್ಳಲು ಭಾರತೀಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.