SK Home Ad
Home ಕ್ರೀಡೆ ವಿಶ್ವದ 100 ಪ್ರಭಾವಿ ಕ್ರೀಡಾಪಟುಗಳ ಪಟ್ಟಿ ಬಿಡುಗಡೆ: ಭಾರತದ ಪರ ‘ರನ್ ಮಷಿನ್’ ಸ್ಮೃತಿ ಮಂಧಾನಾ...

ವಿಶ್ವದ 100 ಪ್ರಭಾವಿ ಕ್ರೀಡಾಪಟುಗಳ ಪಟ್ಟಿ ಬಿಡುಗಡೆ: ಭಾರತದ ಪರ ‘ರನ್ ಮಷಿನ್’ ಸ್ಮೃತಿ ಮಂಧಾನಾ ಒಬ್ಬರೇ ಚಾಂಪಿಯನ್!

0
15

ನವದೆಹಲಿ: ಪ್ರತಿಷ್ಠಿತ ‘ಟೈಮ್ ಮ್ಯಾಗಜಿನ್’ (TIME Magazine) 2026ನೇ ಸಾಲಿನ ಕ್ರೀಡಾ ಜಗತ್ತಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಡೀ ದೇಶವೇ ಹೆಮ್ಮೆ ಪಡುವ ವಿಷಯವೆಂದರೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಪಾತ್ರರಾಗಿದ್ದಾರೆ.

ಜಾಗತಿಕ ದಿಗ್ಗಜರ ಸಾಲಿನಲ್ಲಿ ಮಂಧಾನಾ: ಬ್ಯಾಸ್ಕೆಟ್‌ಬಾಲ್ ದಂತಕಥೆ ಲೆಬ್ರಾನ್ ಜೇಮ್ಸ್ ಅಗ್ರಸ್ಥಾನದಲ್ಲಿರುವ ಈ ಪಟ್ಟಿಯಲ್ಲಿ ಫುಟ್‌ಬಾಲ್ ಐಕಾನ್‌ಗಳಾದ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ಟೆನಿಸ್ ತಾರೆ ಕಾರ್ಲೋಸ್ ಅಲ್ಕರಾಜ್ ಮತ್ತು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರಂತಹ ಘಟಾನುಘಟಿಗಳಿದ್ದಾರೆ. ಇಂತಹ ಎಲೈಟ್ ಕ್ಲಬ್‌ಗೆ ಭಾರತದ ಸ್ಮೃತಿ ಮಂಧಾನಾ ಸೇರ್ಪಡೆಗೊಂಡಿರುವುದು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಸಿಕ್ಕ ಅತಿದೊಡ್ಡ ಮನ್ನಣೆಯಾಗಿದೆ.


ದಾಖಲೆಗಳ ರಾಣಿ : ಮಂಧಾನಾ ಅವರ ಅಪ್ರತಿಮ ಸಾಧನೆಯನ್ನು ಗುರುತಿಸಿರುವ ಟೈಮ್ ಮ್ಯಾಗಜಿನ್, ಅವರ ಕೆಲವು ಪ್ರಮುಖ ಮೈಲಿಗಲ್ಲುಗಳನ್ನು ಉಲ್ಲೇಖಿಸಿದೆ. ದೇಶೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಇವರ ಹೆಸರಲ್ಲಿದೆ. ಜೊತೆಗೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಶತಕ ಬಾರಿಸಿದ ಕೀರ್ತಿ ಹಾಗೂ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 1,000ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ಮಂಧಾನಾ ಹೊಂದಿದ್ದಾರೆ. ಸದ್ಯ 29 ವರ್ಷದ ಮಂಧಾನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ಶತಕಗಳನ್ನು ಸಿಡಿಸಿ ಮಿಂಚುತ್ತಿದ್ದಾರೆ.