SK Home Ad
Home ನಮ್ಮ ಜಿಲ್ಲೆ ಕಲಬುರಗಿ ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡಿದ್ದ ಜಿಂಕೆ ಸೆರೆ

ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡಿದ್ದ ಜಿಂಕೆ ಸೆರೆ

0
300

ಕಲಬುರಗಿ: ನಗರದ ಮಿನಿ ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡಿದ್ದ ಚುಕ್ಕೆ ಜಿಂಕೆಗಳಲ್ಲಿ ಒಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಸೆರೆ ಹಿಡಿದು ರಕ್ಷಿಸಿದ್ದಾರೆ.

ಪ್ರಾಣಿ ಸಂಗ್ರಹಾಲಯದಿಂದ ಹೊರಬಂದ ಜಿಂಕೆ ನಗರದ ವಿಠ್ಠಲ್ ನಗರ ಪ್ರದೇಶದ ಮನೆಯೊಂದರೊಳಗೆ ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯನ್ನು ಸುರಕ್ಷಿತವಾಗಿ ಹಿಡಿಯಲು ಕಾರ್ಯಾಚರಣೆ ಆರಂಭಿಸಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ಬಲೆ ಬಳಸಿ ಜಿಂಕೆಯನ್ನು ಸೆರೆ ಹಿಡಿಯಲಾಯಿತು. ಬಳಿಕ ಅದನ್ನು ಸುರಕ್ಷಿತವಾಗಿ ಮಿನಿ ಪ್ರಾಣಿ ಸಂಗ್ರಹಾಲಯಕ್ಕೆ ಮರಳಿ ಕರೆದೊಯ್ಯಲಾಯಿತು.

ನಗರದ ಮಿನಿ ಪ್ರಾಣಿ ಸಂಗ್ರಹಾಲಯದಿಂದ ಒಟ್ಟು ಮೂರು ಚುಕ್ಕೆ ಜಿಂಕೆಗಳು ತಪ್ಪಿಸಿಕೊಂಡಿದ್ದವು ಎಂದು ತಿಳಿದುಬಂದಿದೆ. ಪ್ರಾಣಿಸಂಗ್ರಹಾಲಯದ ಗೋಡೆ ದಾಟಿ ಹೊರಬಂದ ಜಿಂಕೆಗಳಲ್ಲಿ ಒಂದೇ ವಿಠ್ಠಲ್ ನಗರದ ಮನೆಯೊಳಗೆ ನುಗ್ಗಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳ ಸಮಯೋಚಿತ ಕಾರ್ಯಾಚರಣೆಯಿಂದ ಜಿಂಕೆಯನ್ನು ಯಾವುದೇ ಹಾನಿಯಾಗದಂತೆ ರಕ್ಷಿಸಲಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಉಳಿದ ಜಿಂಕೆಗಳ ಪತ್ತೆ ಹಾಗೂ ಸುರಕ್ಷತೆಗಾಗಿ ಇಲಾಖೆ ಕ್ರಮ ಕೈಗೊಂಡಿದೆ.