Home Advertisement
Home ಅಪರಾಧ ಬೈಕ್ ಸವಾರನ ರುಂಡ ಕಡಿದು ಕೊಲೆ

ಬೈಕ್ ಸವಾರನ ರುಂಡ ಕಡಿದು ಕೊಲೆ

0
224

ಬೆಳಗಾವಿ: ಬೈಕ್ ಸವಾರನೊಬ್ಬನನ್ನು ನಡುರಸ್ತೆಯಲ್ಲಿಯೇ ರುಂಡ ಕಡಿದು ಕೊಲೆ ಮಾಡಿದ ಬೀಭತ್ಸ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹಲಗಾದಲ್ಲಿ ಶುಕ್ರವಾರ ಮಧ್ಯಾಹ್ನ ಬೈಕ್ ಮೇಲೆ ಹೊರಟಿ ತಾರಿಹಾಳ ಕ್ರಾಸ್ ನಿವಾಸಿ ಗದಗಯ್ಯ ಹಿರೇಮಠ(೪೦) ಎಂಬಾತನ ರುಂಡ ಕಡಿದು ಕೊಲೆ ಮಾಡಲಾಗಿದೆ.
ಬೈಕಿನ ಮೇಲೆಯೇ ರುಂಡವಿಲ್ಲದೆ ಬಿದ್ದಿ ಮೃತದೇಹ ಕಂಡು ಬೆಚ್ಚಿದ ಗ್ರಾಮಸ್ಥರು ತಕ್ಷöಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಬೆಳಗಾವಿ ಗ್ರಾಮೀಣ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಲೆಗೆ ಹೊಸ ತಿರುವು
ಬೈಕ್ ಸವಾರನಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ. ಹಲಗಾದಲ್ಲಿ ಶುಕ್ರವಾರ ಮಧ್ಯಾಹ್ನ ಬೈಕ್ ಮೇಲೆ ಹೊರಟಿ ತಾರಿಹಾಳ ಕ್ರಾಸ್ ನಿವಾಸಿ ಗದಗಯ್ಯ ಹಿರೇಮಠ(೪೦) ಕೊಂಡಸಕೊಪ್ಪ ಮೂಲದ ವ್ಯಕ್ತಿಯಾಗಿದ್ದು, ವೃತ್ತಿಯಲ್ಲಿ ಜ್ಯೋತಿಷಿ ಎಂದು ತಿಳಿದುಬಂದಿದೆ. ಗೆಳೆಯನಿಂದ ೨ ಲಕ್ಷö ರೂ ಸಾಲ ಮಾಡಿದ್ದು, ಅದನ್ನು ವಾಪಸ್ ಮಾಡಿರಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತ ಹೆಚ್ಚಿನ ವಿವರಗಳು ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ.

Previous articleಯಡಿಯೂರಪ್ಪರಿಂದ ಪ್ರಧಾನಿ ಮೋದಿ ಭೇಟಿ
Next articleಪೊಲೀಸ್ ಶ್ವಾನ ತುಂಗಾ ನಿಧನ