ಸ್ಯಾಂಡಲ್ವುಡ್ನಲ್ಲಿ ‘ಸೈಡ್ ರೋಲ್ ಮಾಡ್ತೀನಿ’ ಎಂದ ಕೊಹ್ಲಿ – ದ್ಯಾನಿಶ್ ಸೇಠ್ ಜೊತೆ ಮಾತುಕತೆ ವೈರಲ್
ಬೆಂಗಳೂರು: ಐಪಿಎಲ್ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ ಅವರು ಸದ್ಯ ಬೆಂಗಳೂರುದಲ್ಲಿ ತಂಗಿದ್ದು, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕಾಗಿ ಸಜ್ಜಾಗಿದ್ದಾರೆ. ಇದೇ ವೇಳೆ ಅವರು ಯೂಟ್ಯೂಬ್ ವಿಡಿಯೋ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ದ್ಯಾನಿಶ್ ಸೇಠ್ (ಆರ್‌ಸಿಬಿ ಇನ್‌ಸೈಡರ್ ನ್ಯಾಗ್ಸ್) ಜೊತೆಗಿನ ಕೇವಲ ಐದು ನಿಮಿಷಗಳ ಫನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಬ್ಬರ ನಡುವಿನ ಹಾಸ್ಯಮಯ ಮಾತುಕತೆ ಅಭಿಮಾನಿಗಳಿಗೆ ಮುದ ನೀಡಿದೆ.
ಆರ್‌ಸಿಬಿ ಮಾಲೀಕತ್ವ ಬದಲಾವಣೆ ಕುರಿತಾಗಿ ಮಾತನಾಡಿದ ಕೊಹ್ಲಿ, “ಕಂಪನಿ ಯಾವದಾದರೂ ಬರಲಿ, ನ್ಯಾಗ್ಸ್ ಇದ್ದೇ ಇರುತ್ತಾರೆ. ನೀವು ಹಾಗೂ ಜಿರಳೆ ಮಾತ್ರ ಎಲ್ಲ ಕಡೆ ಉಳಿಯಬಹುದು” ಎಂದು ಹಾಸ್ಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಗ್ಸ್, “ನಿಮಗೆ ಅಭದ್ರತಾ ಭಾವ ಕಾಡುತ್ತಿದ್ದರೆ ಹೇಳಿ, ನಾನು ನಿಮ್ಮನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ” ಎಂದು ನ್ಯಾಗ್ಸ್ ಹೇಳಿದರು.
ಇದೇ ವೇಳೆ, ಸ್ಯಾಂಡಲ್‌ವುಡ್ ಪ್ರವೇಶದ ಕುರಿತು ಮಾತನಾಡಿದ ಕೊಹ್ಲಿ, “ಎಲ್ಲೂ ಅವಕಾಶ ಸಿಗದಿದ್ದರೆ ನಿಮ್ಮ ಇನ್‌ಫ್ಲುಯೆನ್ಸ್ ಬಳಸಿ ನಾನು ಕನ್ನಡ ಚಿತ್ರರಂಗದಲ್ಲಿ ಸೈಡ್ ರೋಲ್ ಮಾಡಬಹುದು” ಎಂದು ಹೇಳಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದಕ್ಕೆ ನ್ಯಾಗ್ಸ್ ಸಹ ಬೆಂಬಲ ಸೂಚಿಸಿರುವುದು ಗಮನಾರ್ಹ.
ದ್ಯಾನಿಶ್ ಸೇಠ್ ಅವರು ಕನ್ನಡದಲ್ಲಿ ಹಂಬಲ್ ಪೊಲಿಟೀಶಿಯನ್ ನೋಗರಾಜ್ ಹಾಗೂ ಫ್ರೆಂಚ್ ಬಿರಿಯಾನಿ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
ಐಪಿಎಲ್ ಪಂದ್ಯದ ತಯಾರಿಗಳ ನಡುವೆ ಬಂದಿರುವ ಈ ಹಾಸ್ಯಮಯ ವಿಡಿಯೋ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.























