Home Advertisement
Home ಕ್ರೀಡೆ T20 World Cup Final: ನ್ಯೂಜಿಲೆಂಡ್‌ಗೆ 256 ರನ್‌ ಟಾರ್ಗೆಟ್

T20 World Cup Final: ನ್ಯೂಜಿಲೆಂಡ್‌ಗೆ 256 ರನ್‌ ಟಾರ್ಗೆಟ್

0
117

ಅಹಮದಾಬಾದ: ಆರಂಭಿಕ ಆಟಗಾರರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ 255 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ.

ಅಹಮದಾಬಾದನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಬೃಹತ್‌ ರನ್‌ ಪೇರಿಸುವಲ್ಲಿ ಯಶಸ್ವಿಯಾಗಿದೆ.

ಆರಂಭದಲ್ಲಿಯೇ ನ್ಯೂಜಿಲೆಂಡ್‌ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ಅಭಿಷೇಕ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ ಜೋಡಿ ಕೇವಲ 7.1 ಓವರ್‌ಗಳಲ್ಲಿ 98 ರನ್‌ ಗಳಿಸಿತು. ಈ ವೇಳೆ ಅಭಿಷೇಕ 52(21), ರಾಚೀನ್‌ ರವೀಂದ್ರ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಿದರು.

ಬಳಿಕ ಇಶಾನ್‌ ಕಿಶನ್‌ ಮತ್ತು ಸಂಜು ಸ್ಯಾಮ್ಸನ್‌ 105 ರನ್‌ಗಳ ಜತೆಯಾಟ ನಡೆಸಿತು. ಆಗ ತಂಡದ ಮೊತ್ತ 15.1 ಓವರ್‌ಗಳಲ್ಲಿ 203 ರನ್‌ ಆಗಿತ್ತು. ಈ ವೇಳೆ ಸಂಜು ಸ್ಯಾಮ್ಸ್‌ನ 89(46), ಇಶಾನ್‌ ಕಿಶನ್‌ 54(25) ಜೇಮ್ಸ್ ನೀಶಮ್ ಅವರಿಗೆ ವಿಕೆಟ್‌ ಒಪ್ಪಿಸಿದರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ ಯಾದವ್‌ ಕೂಡ ಗೋಲ್ಡನ್‌ ಡಕ್‌ ಆಗಿ ಹೊರನಡೆದರು.

ಜೇಮ್ಸ್ ನೀಶಮ್ ಒಂದೇ ಓವರ್‌ನಲ್ಲಿ ಪ್ರಮುಖ ಮೂರು ವಿಕೆಟ್‌ ಉರುಳಿಸುವ ಮೂಲಕ ಭಾರತದ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ಶಿವಂ ದುಬೆ ಕೇವಲ 8 ಎಸೆತದಲ್ಲಿ 26 ರನ್‌ ಗಳಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ತಲುಪಿಸಿದರು.