Home ಕ್ರೀಡೆ WPL: ಉದ್ಘಾಟನಾ ಪಂದ್ಯದಲ್ಲೇ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ

WPL: ಉದ್ಘಾಟನಾ ಪಂದ್ಯದಲ್ಲೇ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ

0
19

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಅದ್ಭುತ ಗೆಲುವು ಸಾಧಿಸಿತು.

20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಸವಾಲು ಹಾಕಿದ್ದ 155 ರನ್‌ಗಳ ಬೆನ್ನಟ್ಟಿದ ಬೆಂಗಳೂರು ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಹೊಡೆದು ಗೆಲುವಿನ ಕೇಕೆ ಹಾಕಿತು. ಬೆಂಗಳೂರು ತಂಡದ ಕ್ಲರ್ಕ ಅದ್ಭುತ 63 ರನ್ ಬಾರಿಸಿ ಗೆಲುವಿನ ರೂವಾರಿಯಾದರು.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ತಂಡ 155 ರನ್‌ಗಳ ಸವಾಲನ್ನು ಎಸೆಯಲು ಸಾಧ್ಯವಾಯಿತು. ಇದರ ಮಧ್ಯೆ ಆರ್‌ಸಿಬಿಯ ಆಲ್‌ರೌಂಡರ್ ನಡಿನೆ ಡೆ ಕ್ಲರ್ಕ್ 4 ವಿಕೆಟ್‌ಗಳನ್ನು ಕಬಳಿಸಿ ಆರ್‌ಸಿಬಿ ಪಾಳಯಕ್ಕೆ ಸಮಾಧಾನ ತಂದಿಟ್ಟರು.

ಈ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಎದುರಾಳಿಗೆ ಬ್ಯಾಟಿಂಗ್ ಮಾಡುವ ಅವಕಾಶ ಮಾಡಿಕೊಟ್ಟರು. ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಆಡಿದ ಲೌರೆನ್ ಬೆಲ್ ಮೊದಲ ಓವರ್ ಅನ್ನು ಮೇಡನ್ ಮಾಡಿ ಗಮನ ಸೆಳೆದರು. ಅಲ್ಲದೇ, ಆರಂಭಿಕ ಆಟಗಾರ್ತಿ ಅಮೆಲಿಯಾ ಖೆರ್ ಅವರ ವಿಕೆಟ್ ಪಡೆದು ಆರ್‌ಸಿಬಿಗೆ ಮೊದಲ ವಿಕೆಟ್ ತಂದಿಟ್ಟರು.

ಉತ್ತಮವಾಗಿ ಆಡುತ್ತಿದ್ದ ಜಿ. ಕಮಾಲಿನಿ ಜತೆಗೂಡಿದ್ದ ನ್ಯಾಟ್ ಸೇವಿಯರ್ ಬ್ರಂಟ್ ಕೂಡ 4 ರನ್‌ಗಳಿಸಿ ಡಿ ಕ್ಲರ್ಕ್ಗೆ ವಿಕೆಟ್ ನೀಡಿದರು. ಮೊದಲ 10 ಓವರ್‌ಗಳಲ್ಲಿ ಮುಂಬೈ ಕೇವಲ 63 ರನ್‌ಗಳಿಸಿ 3 ವಿಕೆಟ್ ಕಳೆದುಕೊಂಡಿತ್ತು. ಆದ್ರೆ, ಅಲ್ಲಿವರೆಗೂ ಉತ್ತಮ ಕ್ಷೇತ್ರ ರಕ್ಷಣೆ ಮಾಡಿದ ಸ್ಮೃತಿ ಮಂಧಾನ ಪಡೆ ನಂತರ ತಪ್ಪುಗಳನ್ನು ಮಾಡಿತು. ಕಮಲಿನಿ 32 ರನ್‌ಗಳಿಸಿ ಔಟಾದ್ರೆ, ನಾಯಕಿ ಹರ್ಮಾನ್‌ಪ್ರೀತ್ ಕೌರ್ 20 ರನ್‌ಗಳಿಸಿ ನಿರ್ಗಮಿಸಿದರು.

ಈ ವೇಳೆ ಜೊತೆಗೂಡಿದ ನಿಕೋಲ ಕ್ಯಾರಿ ಹಾಗೂ ಸಜೀವನಿ ಸಜನಾ ಅಮೋಘ ಜೊತೆಯಾಟ ಕಟ್ಟಿದರು. ಸಜನಾಗೆ 2 ಹಾಗೂ 4 ರನ್ ಗಳಿಸಿದ್ದಾಗ ನೀಡಿದ ಜೀವದಾನಗಳೇ ಮುಂಬೈ ಲಾಭವಾಯಿತು. ಈ ಜೋಡಿ 51 ಎಸೆತಗಳಲ್ಲಿ 82 ರನ್‌ಗಳಿಸಿದರು. ನಂತರ ಸಜನಾ ಅವರನ್ನು ಡಿ ಕ್ಲರ್ಕ್ ಕೊನೆ ಓವರ್‌ನಲ್ಲಿ ಔಟ್ ಮಾಡಿದರು. ಅಂತಿಮವಾಗಿ ಮುಂಬೈ 6 ವಿಕೆಟ್‌ಗೆ 154 ರನ್‌ಗಳಿಸಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಆರ್‌ಸಿಬಿಗೆ ಅಮೆಲಿಯಾ ಖೆರ್ ಶಾಕ್ ನೀಡಿದರು. ಉತ್ತಮ ಆರಂಭಕAಡ ತಂಡದಲ್ಲಿ ಸ್ಮೃತಿ ಮೊದಲಿಗೆ ಔಟಾದರೆ, 25 ರನ್‌ಗಳಿಸಿದ ಗ್ರೇಸ್ ಹ್ಯಾರಿಸ್ 2ನೇಯವರಾಗಿ ಔಟಾದರು. 25 ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.