Home Advertisement
Home ಕ್ರೀಡೆ IPL 2026: ಮೊದಲ ಪಂದ್ಯದಲ್ಲೇ ಮಿಂಚಿದ ಜಾಕೋಬ್‌ ಡಫಿ

IPL 2026: ಮೊದಲ ಪಂದ್ಯದಲ್ಲೇ ಮಿಂಚಿದ ಜಾಕೋಬ್‌ ಡಫಿ

0
92

ಬೆಂಗಳೂರು: ಐಪಿಎಲ್‌ ಪಂದ್ಯವಾಳಿಯ ಉದ್ಘಾಟನಾ ಪಂದ್ಯದಲ್ಲಿಯೇ ಭರ್ಜರಿ ಪ್ರದರ್ಶನ ತೋರುವ ಮೂಲಕ ಗೆಲುವಿನ ಆರಂಭ ಮಾಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತೊಮ್ಮೆ ಕಪ್‌ ಎತ್ತುವ ವಿಶ್ವಾಸವನ್ನು ಹೆಚ್ಚಿಸಿದೆ.

ಸಂಘಟಿತ ಪ್ರದರ್ಶನದ ಮೂಲಕ ಗೆಲುವು ಕಂಡ ಆರ್‌ಸಿಬಿಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಹೈದ್ರಾಬಾದ್‌ನ ಪ್ರಮುಖ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಜಾಕೋಬ್‌ ಡಫಿ ಪಂದ್ಯದಲ್ಲಿ ಮಿಂಚಿದ್ದಾರೆ.

ನ್ಯೂಜಿಲೆಂಡಿನ ಜಾಕೋಬ್ ಡಫಿ ಐಪಿಎಲ್‌ನಲ್ಲಿ ಮೊದಲ ಬಾರಿ ಆರ್‌ಸಿಬಿ ಕ್ಯಾಪ್‌ ಹಾಕಿದ್ದಾರೆ. ಶನಿವಾರದ ಪಂದ್ಯ ಅವರ ಮೊದಲ ಪಂದ್ಯವಾಗಿತ್ತು. ಈ ಪಂದ್ಯದಲ್ಲಿಯೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಜಾಕೋಬ್ ಡಫಿ ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಅಭಿಷೇಕ್‌ ಶರ್ಮಾ ಮತ್ತು ಅದೇ ಓವರಿನ ಕೊನೆಯ ಎಸೆತದಲ್ಲಿ ಟ್ರಾವಿಸ್‌ ಹೆಡ್‌ ಅವರನ್ನು ಕ್ಯಾಚ್‌ ಔಟ್‌ ಮಾಡಿದರು. ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ವಿಕೆಟ್‌ ಪಡೆಯುವ ಮೂಲಕ ಕೇವಲ 7 ಎಸೆತಗಳಲ್ಲಿ ಅಂತರದಲ್ಲಿ ಪ್ರಮುಖ ಮೂರು ವಿಕೆಟ್‌ ಉರುಳಿಸಿದರು.

ಓಪನಿಂಗ್‌ ಸ್ಪೆಲ್‌ನಲ್ಲಿ ಬೌಲಿಂಗ್‌ಗೆ ಬಂದ ಜಾಕೋಬ್ ಡಫಿ ಬ್ರೇಕ್‌ ಇಲ್ಲದೆ ನಾಲ್ಕು ಓವರ್‌ಗಳನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಡಫಿ 4 ಓವರ್‌ಗಳಲ್ಲಿ 22 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ ಪಡೆದರು.