ಬೆಂಗಳೂರು: ದೇವದತ್ತ ಪಡಿಕಲ್ ಸ್ಫೋಟಕ ಬ್ಯಾಟಿಂಗ್ ಮತ್ತು ವಿರಾಟ ಕೊಹ್ಲಿ ಅರ್ಧಶತಕ, ನಾಯಕ ರಜತ್ ಪಾಟಿದಾರ್ ಅಬ್ಬರ ಬ್ಯಾಟಿಂಗ್ ನಿಂದಾಗಿ ಆರ್ ಸಿಬಿ 19 ನೇ ಆವೃತ್ತಿ ಐಪಿಎಲ್ ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪ್ರಸಕ್ತ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಟಾಸ್ ಸೋತರು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್‌ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಬೆಂಗಳೂರು ಆರಂಭದಲ್ಲಿ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಆದರೆ ಬಳಿಕ ಬಂದ ದೇವದತ್ತ ಹೈದ್ರಾಬಾದ್ ಬೌಲರ್‌ಗಳ ಬೆವರಿಳಿಸಿದರು. ಅಂತಿಮವಾಗಿ ಬೆಂಗಳೂರು 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಆರಂಭಿಕ ಆಘಾತ: ಸನ್‌ರೈಸರ್ಸ್ ಆರಂಭದಲ್ಲಿಯೇ ಆಘಾತವನ್ನು ಅನುಭವಿಸಿತು. 2 ಓವರ್‌ಗಳಲ್ಲಿ 18 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿಯೇ ಇದ್ದ ತಂಡಕ್ಕೆ ಇನ್ನಿಂಗ್ಸ್‌ನ ಮೂರನೇ ಓವರ್ ಎಸೆಯಲು ಬಂದ ಜಾಕೋಬ್ ಡಫಿ ಮೊದಲ ಎಸೆತದಲ್ಲಿಯೇ ಅಭಿಷೇಕ ಶರ್ಮಾ (7), ಕೊನೆಯ ಎಸೆತದಲ್ಲಿ ಟ್ರಾವಿಸ್ ಹೆಡ್ (11) ವಿಕೆಟ್ ಉರುಳಿಸಿದರು.
ಜಾಕೋಬ್ ಡಫಿ ಮತ್ತೆ ಇನ್ನಿಂಗ್ಸ್‌ನ ಐದನೇ ಓವರ್ ಎರಡನೇ ಎಸೆತದಲ್ಲಿ ನಿತೀಶ್‌ಕುಮಾರ್ ರೆಡ್ಡಿ (1) ವಿಕೆಟ್ ಉರುಳಿಸಿ ಎಸ್‌ಆರ್‌ಎಚ್‌ನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ನಾಲ್ಕನೇ ವಿಕೆಟ್‌ಗೆ ಇಶಾನ್ ಕಿಶನ್‌ಗೆ ಮತ್ತು ಹೆನ್ರಿಕ್ ಕ್ಲಾಸೆನ್ ಜೋಡಿ ಕೇವಲ 53 ಎಸೆತಗಳಲ್ಲಿ 97 ರನ್‌ಗಳ ಜತೆಯಾಟ ನಡೆಸಿತು. ಈ ಮೂಲಕ ಈ ಜೋಡಿ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿರುವಾಗಲೇ ರೊಮಾರಿಯೊ ಶೆಫರ್ಡ್ ಅವರ ಎಸೆತದಲ್ಲಿ ಫಿಲ್ ಸಾಲ್ಟ್ ಅವರಿಗೆ ಕ್ಯಾಚ್ ನೀಡಿ ಕ್ಲಾಸೆನ್ ಹೊರನಡೆದರು.
ಇವರ ಹಿಂದೆಯೇ ಸಲಿಲ್ ಅರೋರಾ (9), ಇಶಾನ್ ಕಿಶನ್ (80), ಹರ್ಷ ದುಬೆ (3), ಹರ್ಷಲ್ ಪಟೇಲ್ (0) ಕೂಡ ಪೆವಿಲಿಯನ್ ಹಾದಿ ಹಿಡಿದರು.
ಅನಿಕೇತ್ ವರ್ಮಾ ಅಬ್ಬರ: 5ನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ಅನಿಕೇತ್ ವರ್ಮಾ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು. ಕೇವಲ 18 ಎಸೆತಗಳಲ್ಲಿ 3 ಬೌಂಡರ್ 4 ಸಿಕ್ಸರ್ ನೆರವಿನಿಂದ 43 ರನ್‌ಗಳಿಸಿ ಶೆಫರ್ಡ್ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು.
ಆರ್‌ಸಿಬಿ ಪರ ಜಾಕೋಬ್ ಡಫಿ ಮತ್ತು ರೊಮಾರಿಯೊ ಶೆಫರ್ಡ್ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಭುವನೇಶ್ವರ ಕುಮಾರ, ಅಭಿನಂದನ ಸಿಂಗ್‌ಸುಯಶ್ ಶರ್ಮಾ ತಲಾ 1 ವಿಕೆಟ್ ಪಡೆದರು.























