ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ವಿಶೇಷ ಗೌರವ ದೊರೆತಿದೆ. ದೆಹಲಿಯ ದ್ವಾರಕಾದಲ್ಲಿ ನಿರ್ಮಾಣವಾಗುತ್ತಿರುವ ‘ದಿ ಓಮ್ಯಾಕ್ಸ್ ಸ್ಟೇಟ್’ ಕ್ರೀಡಾಂಗಣದ ಒಂದು ಸ್ಟ್ಯಾಂಡ್‌ಗೆ ಅವರ ಹೆಸರನ್ನು ಇಡುವುದಾಗಿ ಓಮ್ಯಾಕ್ಸ್ ಸಂಸ್ಥೆ (Omaxe Limited) ಘೋಷಿಸಿದೆ.
ಈ ಸ್ಟ್ಯಾಂಡ್ ಅನ್ನು ‘ಹರ್ಮನ್‌ಪ್ರೀತ್ ಕೌರ್ ಸ್ಟ್ಯಾಂಡ್’ ಎಂದು ಹೆಸರಿಸಲಾಗಿದ್ದು, ಇದು ಭಾರತದ ಮೊದಲ ಅಧಿಕೃತ “ಪಿಂಕ್ ಸ್ಟ್ಯಾಂಡ್” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಿಳಾ ಕ್ರೀಡಾಭಿಮಾನಿಗಳು ಹಾಗೂ ಕುಟುಂಬಗಳಿಗೆ ಹೆಚ್ಚು ಸುರಕ್ಷಿತ ಮತ್ತು ಸ್ವಾಗತಾರ್ಹ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸ್ಟ್ಯಾಂಡ್ ವಿನ್ಯಾಸಗೊಳಿಸಲಾಗಿದೆ.
ಕ್ರೀಡಾಂಗಣದ ವಿಶೇಷತೆ : ಈ ಕ್ರೀಡಾಂಗಣವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ಜೊತೆಗೂಡಿ ಓಮ್ಯಾಕ್ಸ್ ಲಿಮಿಟೆಡ್ ನಿರ್ಮಿಸುತ್ತಿದ್ದು, ಸುಮಾರು 30,000 ಆಸನ ಸಾಮರ್ಥ್ಯ ಹೊಂದಿರಲಿದೆ. ‘ಪಿಂಕ್ ಸ್ಟ್ಯಾಂಡ್’ ಮಾತ್ರವೇ 1,500 ಕ್ಕೂ ಹೆಚ್ಚು ಆಸನಗಳನ್ನು ಹೊಂದಿದ್ದು, ನಾರ್ತ್ ಪೆವಿಲಿಯನ್ ಲೋವರ್ ಬೌಲ್‌ನಲ್ಲಿ ಇರಲಿದೆ. ಈ ಮಹತ್ವಾಕಾಂಕ್ಷಿ ಯೋಜನೆ 2027ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಎರಡು ಕ್ರೀಡಾಂಗಣ ಸ್ಟ್ಯಾಂಡ್ ಹೊಂದಿದ ಮೊದಲ ಆಟಗಾರ್ತಿ : ಈ ಗೌರವದೊಂದಿಗೆ ಹರ್ಮನ್‌ಪ್ರೀತ್ ಕೌರ್ ಅವರು ಭಾರತದಲ್ಲಿ ತಮ್ಮ ಹೆಸರಿನಲ್ಲಿ ಎರಡು ಕ್ರೀಡಾಂಗಣ ಸ್ಟ್ಯಾಂಡ್‌ಗಳನ್ನು ಹೊಂದಿದ ಮೊದಲ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೆಹಲಿಯ ದ್ವಾರಕಾದಲ್ಲಿ ನಿರ್ಮಾಣವಾಗುತ್ತಿರುವ ‘ದಿ ಓಮ್ಯಾಕ್ಸ್ ಸ್ಟೇಟ್’ ಕ್ರೀಡಾಂಗಣದ ಒಂದು ಸ್ಟ್ಯಾಂಡ್‌ಗೆ ಅವರ ಹೆಸರನ್ನು ಇಡುವುದಾಗಿ ಓಮ್ಯಾಕ್ಸ್ ಸಂಸ್ಥೆ (Omaxe Limited) ಘೋಷಿಸಿದೆ. ಮತ್ತೊಂದು ಸ್ಟ್ಯಾಂಡ್ (ನ್ಯೂ ಚಂಡೀಗಢ). ಪಂಜಾಬ್‌ನ ಮುಲ್ಲನ್‌ಪುರದಲ್ಲಿದೆ .
ಮಹಿಳಾ ಕ್ರೀಡಾಭಿಮಾನಿಗಳಿಗೆ ಉತ್ತೇಜನ : ‘ಪಿಂಕ್ ಸ್ಟ್ಯಾಂಡ್’ ಮಹಿಳೆಯರು ಮತ್ತು ಕುಟುಂಬಗಳು ಸುಲಭವಾಗಿ ಕ್ರೀಡಾಕೂಟಗಳನ್ನು ಅನುಭವಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಇದು ಕ್ರೀಡಾಂಗಣಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮಹತ್ವದ ಹೆಜ್ಜೆಯಾಗಿದೆ.
ಮಹಿಳಾ ಅಭಿಮಾನಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಭಾರತದ ಮೊದಲ “ಪಿಂಕ್ ಸ್ಟ್ಯಾಂಡ್” ಗೌರವದೊಂದಿಗೆ ಹರ್ಮನ್‌ಪ್ರೀತ್ ಕೌರ್ ಅವರು ಭಾರತದಲ್ಲಿ ತಮ್ಮ ಹೆಸರಿನಲ್ಲಿ ಎರಡು ಕ್ರೀಡಾಂಗಣ ಸ್ಟ್ಯಾಂಡ್‌ಗಳನ್ನು ಹೊಂದಿದ ಮೊದಲ ಮಹಿಳಾ ಕ್ರಿಕೆಟಿಗರಾಗಿದ್ದಾರೆ.






















