Home Advertisement
Home ಕ್ರೀಡೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಷರತ್ತು ಬದ್ಧ ಅನುಮತಿ

ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಷರತ್ತು ಬದ್ಧ ಅನುಮತಿ

0
39

ಬೆಂಗಳೂರು: ಜೂನ್ 4ರ ಕೆಎಸ್‌ಸಿಎ ಕಾಲ್ತುಳಿತದ ನಂತರ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿದಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಗೂ ಐಪಿಎಲ್ ಪಂದ್ಯಗಳು ನಡೆಯುವುದು ಖಚಿತಗೊಂಡಿದೆ.

ನಿರೀಕ್ಷೆಯಂತೆಯೇ ಗುರುವಾರ ಸಚಿವ ಸಂಪುಟದ ನಿರ್ಧಾರದ ಬಳಿಕ ಆರ್‌ಸಿಬಿಗೆ ಬೆಂಗಳೂರಿನಲ್ಲೇ ತವರಿನ ಪಂದ್ಯಗಳನ್ನು ಆಡಲು ಸರ್ಕಾರ ಅನುಮತಿ ನೀಡಿದ್ದು, ಕೆಲವೊಂದು ಷರತ್ತುಗಳನ್ನೂ ವಿಧಿಸಿದೆ.

ಈ ಸರ್ಕಾರದ ಅನುಮತಿಯಲ್ಲಿ ಕೆಲವೊಂದು ಷರತ್ತುಗಳು ಕೂಡ ಒಳಗೊಂಡಿದ್ದು, ಕಡ್ಡಾಯವಾಗಿ ಪಾಲಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ)ಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಸಚಿವ ಸಂಪುಟ ನಿರ್ಣಯ

ಪಂದ್ಯಗಳ ವೇಳೆ ಸುವ್ಯವಸ್ಥಿತ ವ್ಯವಸ್ಥೆಗಳನ್ನು ಹೊಂದಿರಬೇಕಾಗಿದ್ದು, ಅಭಿಮಾನಿಗಳು ಸ್ಟೇಡಿಯಂನಿಂದ ನಿರ್ಗಮಿಸುವ ಗೇಟ್‌ಗಳ ಬಗ್ಗೆ ಗಮನವಿರಿಸಲು ಸೂಚಿಸಲಾಗಿದೆ. 35 ಸಾವಿರ ಟಿಕೆಟ್ ನೀಡಲು ಸೂಚಿಸಲಾಗಿದೆ.

Previous articleತೆಕ್ಕಲಕೋಟೆಯ ಮಣ್ಣಲ್ಲಿ ಅಡಗಿದ ಇತಿಹಾಸದ ರಹಸ್ಯ
Next articleಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಸಚಿವ ಸಂಪುಟ ನಿರ್ಣಯ