SK Home Ad
Home ತಾಜಾ ಸುದ್ದಿ ಬಿಜೆಪಿ ನಾಯಕರಿಗೆ ವಿಜಯಪುರ ಎಂದರೆ ಸುಣ್ಣವೇ ಹೊರತು…

ಬಿಜೆಪಿ ನಾಯಕರಿಗೆ ವಿಜಯಪುರ ಎಂದರೆ ಸುಣ್ಣವೇ ಹೊರತು…

0
127

ಇವರ ಸಮಸ್ಯೆಗಳನ್ನೇ ಬಗೆಹರಿಸಿಕೊಳ್ಳಲಾಗದ ಇವರು ಜನರಿಗೆ ಏನು ತಾನೆ ಒಳಿತು ಮಾಡುವರು!

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ವಿಜಯಪುರದ ನಾಯಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಿಜೆಪಿ ನಾಯಕರಿಗೆ ವಿಜಯಪುರ ಎಂದರೆ ಸುಣ್ಣವೇ ಹೊರತು ಬೆಣ್ಣೆ ಸಿಗುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು 7 ಬಾರಿ ಸಂಸದರಾದ ಹಿರಿಯ ದಲಿತ ನಾಯಕರಿಗೆ, ಕೇಂದ್ರ ಸಚಿವ ಸ್ಥಾನವಿಲ್ಲ, ಸೂಕ್ತ ಗೌರವವಿಲ್ಲ. ಮತ್ತೆ ಹಿಂದೂ ಫೈರ್ ಬ್ರಾಂಡ್ ಎಂದು ಹೇಳಿಕೊಳ್ಳುವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ರಾಜ್ಯದಲ್ಲಿ ಎಂದೂ ಸಚಿವರನ್ನಾಗಿ ಮಾಡಲಿಲ್ಲ ಅಥವಾ ಒಂದು ಗೌರವ ಸ್ಥಾನ ನೀಡಿಲ್ಲ. ವಿಜಯೇಂದ್ರ ಅವರ ಸತ್ಯ ಶೋಧನಾ ಸಮಿತಿಯಲ್ಲಿ ಅತ್ತು, ಗೋಗರೆದ ನಂತರ ಇವರನ್ನು ಸಮಿತಿಗೆ ಸೇರಿಸಿಕೊಂಡರು, ಮತ್ತದೇ ಭಿನ್ನಮತ! ಅದೇ ರಾಗ! ಅದೇ ಹಾಡು! ಇವರ ಸಮಸ್ಯೆಗಳನ್ನೇ ಬಗೆಹರಿಸಿಕೊಳ್ಳಲಾಗದ ಇವರು ಜನರಿಗೆ ಏನು ತಾನೆ ಒಳಿತು ಮಾಡುವರು! ಸುಳ್ಳಿನ ಅಡಿಪಾಯದ ಮೇಲೆ ಕಟ್ಟಿರುವ ಸತ್ಯ ಶೋಧನಾ ಸಮಿತಿಯ ಕೆಲಸ, “ಸತ್ಯ ಹೊಸ್ತಿಲು ದಾಟುವ ಮುನ್ನವೆ ಸುಳ್ಳು ಊರು ಸುತ್ತಿ ಬಂದಿತ್ತು” ಎಂಬಂತಾಗಲಿದೆ ಎಂದಿದ್ದಾರೆ.