ದೇವರೊಬ್ಬನೇ ರಕ್ಷಕ

0
13

ಮಗು ಪ್ರಹ್ಲಾದನು ನರಸಿಂಹದೇವರನ್ನು ಕುರಿತು ಹೀಗೆ ಹೇಳುತ್ತಾನೆ ನರಸಿಂಹನೇ ಮಗುವಿಗೆ ತಂದೆ-ತಾಯಿಗಳು ರಕ್ಷಕರು, ರೋಗಿಗೆ ಔಷಧಿಯು ರಕ್ಷಕ. ಮುಳುಗುವವನಿಗೆ ನೌಕೆಯು ರಕ್ಷಕ. ಬಿಸಿಲಬೇಗೆಯಲ್ಲಿ ಬಂದವನಿಗೆ ಶೀತೋಪಚಾರವು ರಕ್ಷಕ. ಹಾಗೆಯೇ ಸಂಸಾರದಲ್ಲಿ ಬೆಂದವರಿಗೆ ನೀನೇ ರಕ್ಷಕ. ನೀನೇ ಆಪದ್ಭಾಂಧವ. ನಿನ್ನನ್ನು ಬಿಟ್ಟು ಬೇರೆ ಯಾವುದೂ ಕೂಡ ಇಷ್ಟ್ಟವಿಲ್ಲ. ಜಗತ್ತನ್ನೇ ಸಂರಕ್ಷಕನಾದ ದೇವರು ಈ ವಿಶ್ವದ ರಕ್ಷಕನಾಗಿದ್ದಾನೆ. ಹುಟ್ಟು ಅವನಿಂದಲೇ… ರಕ್ಷಣೆ, ಪೋಷಣೆ ಅವನಿಂದಲೇ ಕಾಲ ಬಂದಾಗ ಅಂತ್ಯವೂ ಅವನಿಂದಲೇ… ಇರುವಾಗ ಸುಖದಿಂದ ಇರಬೇಡವೇ.. ಅದಕ್ಕೆ ವಿಶ್ವರಕ್ಷಕನಾದ ದೇವರು ನಮ್ಮ ರಕ್ಷಕನೆಂಬ ಭರವಸೆಯಿಂದಲೇ ಜೀವಿಸಬೇಕು. ಇದು ಸಂಸಾರ. ಸಂಸಾರದಲ್ಲಿ ಆಶಾಪಾಶಗಳು ಸಹಜವೇ. ಆದರೆ ಕರ್ಮಾದಿ ಕಾರಣಗಳಿಂದ ಅದನ್ನು ಮಿತದಿಂದಲೇ ಸಾಗಿಸಬೇಕಿದೆ.
ಸಂಸಾರ ಸುಖ ಮರು ಮರೀಚಿಕೆ: ನೋಡಲು ಕಣ್ಣಿಗೆ ಆನಂದ, ಕೇಳಲು ಕಿವಿಗೆ ಆನಂದ, ಮೂಸಲು ಮೂಗಿಗೆ ಆನಂದ. ತಿನ್ನಲು ನಾಲಿಗೆಗೆ ಆನಂದ, ಇದರೆ ಈ ಸುಖವೆಲ್ಲವೂ ಕೇವಲ ಮರು ಮರೀಚಿಕೆ. ಈ ಭೋಗವಸ್ತುಗಳಿಂದಲೇ ಈ ದೇಹವು ರೋಗಕ್ಕೆ ತುತ್ತಾಗಿ ಹಾಳಾಗುತ್ತದೆ. ಇಷ್ಟಾದರೂ ಜನರಿಗೆ ವೈರಾಗ್ಯ ಬರುವುದೇ ಇಲ್ಲ. ಎಲ್ಲವನ್ನು ತಿಳಿದವನೂ ಸಹ ಬಯಕೆಯ ಬೆಂಕಿಯನ್ನು ದುರ್ಲಭವಾದ ಅಲ್ಪ ಭೋಗಸುಖದಿಂದ ತೃಪ್ತಿಪಡಿಸಲು ಪ್ರಯತ್ನಿಸುತ್ತಾನೆ.
ಸೇವೆಯಿಂದಲೇ ಕಲ್ಪವೃಕ್ಷಕ್ಕೆ ಸಂತೋಷ: ಇವನು ನನ್ನವನು, ಇವನಿಗೆ ಒಳ್ಳೆಯದನ್ನು ಮಾಡು, ಇವನು ಬೇರೆಯವನು, ಇವನಿಗೆ ಒಳ್ಳೆಯದನ್ನು ಮಾಡಬೇಡ. ಇಂಥ ಪಕ್ಷಪಾತಬುದ್ಧಿಯಿಂದಲೇ ಜಗತ್ತು ತುಂಬಿದೆ. ಆದರೆ, ಲವಲೇಶವು ನಿನಗೆ ಇಂಥ ಭಾವನೆಯಿಲ್ಲ. ಭಕ್ತರಿಗೆ ಅನುಗ್ರಹಿಸುವುದರಿಂದಲೇ ನನಗೆ ಸಂತೋಷ. ಸೇವೆಯಿಂದಲೇ ಕಲ್ಪವೃಕ್ಷಕ್ಕೆ ಸಂತೋಷ. ಅದರಂತೆ ನಿನಗೂ ಸಹ, ನಮ್ಮ ಅಭಿಷ್ಟಫಲ ಸಿದ್ಧಿಗೆ ನಿನಗೆ ನಾವು ಮಾಡುವ ಸೇವೆಗೆ ಅನುಗುಣವಾಗಿರುತ್ತದೆ. ಹೊರತು, ಪಕ್ಷಪಾತದಿಂದ ಅದು ವ್ಯತ್ಯಾಸ ಹೊಂದುವುದಿಲ್ಲ.

Previous articleಶ್ರಮಕ್ಕೆ ಬೇಕಿಲ್ಲವೇ ಮೌಲ್ಯ ಮರ್ಯಾದೆ?
Next articleಡಿಕೆಶಿ ಭೇಟಿಯಾದ ಸಂಸದ ತೇಜಸ್ವಿ ಸೂರ್ಯ